Cinema

ಆರ್‌ ಆರ್‌ ಆರ್‌ ಪ್ರೀ-ರಿಲೀಸ್‌ ಇವೆಂಟ್‌ ಮುಂದಕ್ಕೆ

ಟಾಲಿವುಡ್‌: ಎಸ್‌. ಎಸ್‌. ರಾಜಮೌಳಿ ನಿರ್ದೇಶನದ ಬಹು ನಿರೀಕ್ಷೆಯ ಸಿನಿಮಾ ಆರ್‌ ಆರ್‌ ಆರ್‌ ಬಿಡುಗಡೆಗೆ ೬ ದಿನ ಬಾಕಿ ಇದೆ. ಅಂದರೆ ಜನವರಿ ೭ ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಮೋಷನ್‌ ಕಾರ್ಯದಲ್ಲಿ ತೊಡಗಿದೆ. ರಾಜಮೌಳಿ ಸಿನಿಮಾ ಅಂದರೆ ಸಾಕು ಅಭಿಮಾನಿಗಳು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗುತ್ತಿದೆ. ಹೀಗಾಗಿ ಹಿಂದೆ ಒಮ್ಮೆ ಬೆಂಗಳೂರಿಗೆ ಇಡೀ ಚಿತ್ರರಂಗವೇ ಭೇಟಿ ನೀಡಿತ್ತು. ಈ ಮೊದಲು ಚೆನ್ನೈ ಹಾಗೂ ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಿತ್ತು. ಆದರೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಪ್ರೀ-ರಿಲೀಸ್​ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ಈಗ ಅದು ಮುಂದೂಡಲ್ಪಟ್ಟಿದೆ. ಇದೀಗ ಅಭಿಮಾನಿಗಳು ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೇಲರ್​ ಮೂಲಕ ಸಿನಿಮಾ ಗಮನ ಸೆಳೆದಿದೆ. ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್​ ಆಗುತ್ತಿದೆ. ಈ ಚಿತ್ರದಲ್ಲಿ ಜ್ಯೂ.ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​, ಅಜಯ್​ ದೇವಗನ್​ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ

Share Post