CinemaDistricts

ರಾಗಿಣಿ ಮದುವೆಗೆ ಬಂದ ರಶ್ಮಿಕಾ ಪರದಾಡಿದ್ದೇಕೆ..?

ಮಡಿಕೇರಿ; ತೆಲುಗಿನಲ್ಲಿ ಬ್ಯುಸಿ ನಟಿಯಾಗಿರುವ ರಶ್ಮಿಕಾ ಮಂದಣ್ಣ. ಅಪರೂಪಕ್ಕೆ ತಮ್ಮ ತವರು ನೆಲವನ್ನು ನೆನಪಿಸಿಕೊಂಡಿದ್ದರು. ಭಾನುವಾರ ಕೊಡಗಿನಲ್ಲಿ ನಡೆದ ತನ್ನ ಸ್ನೇಹಿತೆ ರಾಗಿಣಿ ಮದುವೆಗೆ ಆಗಮಿಸಿದ್ದರು. ಆದರೆ ಫ್ಲೈಟ್‌ ಲೇಟಾಗಿ ಮದುವೆ ತಪ್ಪಿಹೋಗುತ್ತೇನೋ ಎಂದು ಪರದಾಡಿದರು ಎಂಬ ಮಾಹಿತಿ ಸಿಕ್ಕಿದೆ. 

 

ಬಾಲ್ಯ ಸ್ನೇಹಿತೆ ರಾಗಿಣಿ ಮದುವೆಗೆ ಹೋಗಲೇಬೇಕೆಂದು ನಿರ್ಧರಿಸಿದ್ದ ರಶ್ಮಿಕಾ ಅವರು ಹೈದರಾಬಾದ್‌ಬಿಂದ ಬೆಲಗ್ಗೆ ನಾಲ್ಕು ಗಂಟೆಯ ಫ್ಲೈಟ್‌ ಬುಕ್‌ ಮಾಡಿದ್ದರು. ಆದ್ರೆ, ಅದು ಬರುವುದಕ್ಕೆ ತಡವಾಗಿದೆ. ಹೀಗಾಗಿ ಮದುವೆ ಮಿಸ್‌ ಮಾಡಿಕೊಳ್ಳುತ್ತೇನೇನೋ ಎಂದು ರಶ್ಮಿಕಾ ಕೆಲಕಾಲ ಒದ್ದಾಡಿದ್ದರಂತೆ. ಆದ್ರೆ, ತಡವಾಗಿಯಾದ್ರೂ ಅವರು ಮದುವೆ ಮಂಟಪ ಸೇರಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ರಶ್ಮಕಾ ಮಂದಣ್ಣ, ತನ್ನ ಬಾಲ್ಯ ಸ್ನೇಹಿತೆಯರ ಜೊತೆ ಕಾಲಕಳೆದಿದ್ದಾರೆ. ಅವರೊಂದಿಗೆ ಸೆಲ್ಫಿಗಳನ್ನು ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.

ಸದ್ಯ ತಮಿಳು, ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಈ ನಡುವೆ ಬಿಡುವು ಮಾಡಿಕೊಂಡು ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಂಡಿದ್ದರ ಕುರಿತು ಅಭಿಮಾನಿಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಈ ನೆಪದಲ್ಲಾದರೂ ನೀವು ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು ಖುಷಿಯಾಗಿದೆ ಎಂದು ಹರ್ಷ ‍ವ್ಯಕ್ತಪಡಿಸಿದ್ದಾರೆ.

Share Post