CinemaLifestyle

RAMAYAN SERIAL; ಇಂದಿನಿಂದ ದೂರದರ್ಶನದಲ್ಲಿ ʻರಾಮಾಯಣʼ ಧಾರಾವಾಹಿ ಪ್ರಸಾರ

ಬೆಂಗಳೂರು; ಮೂರು ದಶಕಗಳ ಹಿಂದೆ ದೂರದರ್ಶನದಲ್ಲಿ ರಾಮಯಾಣ ಧಾರವಾಹಿ ಬರುತ್ತಿತ್ತು. ಅದನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಇದೀಗ ಮತ್ತೆ ಅದೇ ಧಾರವಾಹಿ ನಮಗೆ ನೋಡಲು ಸಿಗುತ್ತಿದೆ. ಇಂದಿನಿಂದ ನಾವು ಮನೆಯಲ್ಲಿ ಕುಳಿತು ರಾಮಾಯಣವನ್ನು ಕಣ್ತುಂಬಿಕೊಳ್ಳಬಹುದು. ದೂರದರ್ಶನ ನ್ಯಾಷನಲ್‌ ನಲ್ಲಿ ಇಂದು ಸಂಜೆ 6 ಗಂಟೆಗೆ ರಾಮಾಯಣದ ಮೊದಲ ಕಂತು ಪ್ರಸಾರವಾಗಲಿದೆ. ಮರುದಿನ ಮಧ್ಯಾಹ್ನ 12ಕ್ಕೆ ಅದೇ ಕಂತು ಮರುಪ್ರಸಾರ ಕೂಡಾ ಆಗಲಿದೆ. ಸಂಜೆ ನೋಡದೇ ಇದ್ದವರು ಮಧ್ಯಾಹ್ನದ ಬಿಡುವಿನಲ್ಲಿ ನೋಡಬಹುದು. 

36 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಮಹಾ ಧಾರಾವಾಹಿ

ಸರಿಯಾಗಿ ಮೂವತ್ತಾರು ವರ್ಷಗಳ ಹಿಂದೆ ರಾಮಾಯಣ ಧಾರವಾಹಿಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ರಮಾನಂದ್ ಸಾಗರ್ ನಿರ್ದೇಶನದ ಆ ಮಹಾ ಧಾರಾವಾಹಿಯನ್ನು ತಯಾರಿಸಲಾಗಿತ್ತು. 1978ರಲ್ಲಿ ಶುರುವಾದ ಧಾರಾವಾಹಿ ಪ್ರತಿ ಭಾನುವಾರ ದೂರದರ್ಶನದಲ್ಲಿ ಬೆಳಗ್ಗೆ ಸಮಯದಲ್ಲಿ ಪ್ರಸಾರವಾಗುತ್ತಿತ್ತು. ಜನರು ಅಂದು ಎಲ್ಲಾ ಕೆಲಸ ಬಿಟ್ಟು ತಪ್ಪದೆ ರಾಮಾಯಣ ನೋಡುತ್ತಿದ್ದರು.

ಪಾತ್ರಗಳನ್ನು ನೋಡಿಯೇ ಕೈ ಮುಗಿಯುತ್ತಿದ್ದ ಅಂದಿನ ಜನ

ಅಂದು ಟಿವಿಗಳಲ್ಲಿ ರಾಮಾಯಣ ಪ್ರಸಾರ ಆಗುತ್ತಿದ್ದಾಗ ರಾಮ ಹಾಗೂ ಸೀತೆಯ ಪಾತ್ರಗಳನ್ನು ನೋಡಿಯೇ ಕೈಮುಗಿಯುತ್ತಿದ್ದರು. ಆ ಪಾತ್ರಗಳನ್ನೇ ದೇವರೆಂದು ನಂಬಿದ್ದರು. ಅಷ್ಟು ಅಚ್ಚುಕಟ್ಟಾಗಿ ಅದರಲ್ಲಿ ಪಾತ್ರಧಾರಿಗಳು ನಟಿಸಿದ್ದಾರೆ.

ಈಗ ಮತ್ತೆ ರಾಮಾಯಣ ಪ್ರಸಾರ, ಮಕ್ಕಳಿಗೆ ಇದನ್ನು ತೋರಿಸಿ

ಅಂದು ಬಹುತೇಕರ ಮನೆಗಳಲ್ಲಿ ಟಿವಿಗಳೇ ಇರಲಿಲ್ಲ. ಶ್ರೀಮಂತರು ಮಾತ್ರ ರಾಮಾಯಣವನ್ನು ನೋಡುತ್ತಿದ್ದರು. ಬಡವರು ಶ್ರೀಮಂತರ ಮನೆಗಳ ಮುಂದೆ ಕಾದುಕೊಂಡಿದ್ದು ರಾಮಾಯಣ ನೋಡಬೇಕಾಗುತ್ತು. ಅದೂ ಕೂಡಾ ಅವರು ಅನುಮತಿ ಕೊಟ್ಟರೆ. ಈಗ ಕಾಲ ಬದಲಾಗಿದೆ. ಎಲ್ಲರ ಮನೆಗಳಲ್ಲೂ ಟಿವಿಗಳು ಬಂದಿವೆ. ಹೀಗಾಗಿ ಇಂದಿನಿಂದ ಪ್ರಸಾರವಾಗುವ ರಾಮಾಯಣ ಧಾರಾವಾಹಿಯನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದು. ಈ ಹಿಂದೆ ನೋಡದವರಿಗೂ ಇದು ಸುವರ್ಣಾವಕಾಶವಾಗಿದೆ.

ಇನ್ನು ಈಗಿನ ಮಕ್ಕಳು ಜೀವನದ ಮೌಲ್ಯಗಳನ್ನೇ ಮರೆಯುತ್ತಿದ್ದಾರೆ. ಹಿರಿಯರ ಮೇಲಿನ ಗೌರವಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಿನ ಮಕ್ಕಳಿಗೆ ರಾಮಾಯಣ ಧಾರಾವಾಹಿ ತೋರಿಸುವುದು ಒಳ್ಳೆಯದು. ಈ ಧಾರಾವಾಹಿ ನೋಡಿದ ಮೇಲಾದರೂ, ಮಕ್ಕಳು ನಮ್ಮ ಮಣ್ಣನ  ಸಂಸ್ಕೃತಿಯನ್ನು ಅರಿಯಲಿದ್ದಾರೆ.

Share Post