CinemaLifestyle

ಮಾನುಷಿ ಚಿಲ್ಲರ್; ಈ ವಿಶ್ವ ಸುಂದರಿಗೆ ರಾಮಚರಣ್ ಜೊತೆ ಡೇಟಿಂಗ್ ಮಾಡೋ ಆಸೆಯಂತೆ..!!

ಮಾನುಷಿ ಚಿಲ್ಲರ್.. ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ.. ಈಕೆ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್‌ಗೆ ನಾಯಕಿಯಾಗಿ ಮಾನುಷಿ ನಟಿಸಿರುವ ಪೃಥ್ವಿರಾಜ್ ಜೂನ್ 3 ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರದ ಅಂಗವಾಗಿ ನೀಡಿದ ಸಂದರ್ಶನದಲ್ಲಿ ಮಾನುಷಿ ಚಿಲ್ಲರ್ ಹಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಮಾನುಷಿ ಚಿಲ್ಲರ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ “ನಾನು RRR ನೋಡಿದ ನಂತರ ಚರಣ್ ಅವರ ಅಭಿಮಾನಿಯಾದೆ. ಚರಣ್ ಜೊತೆ ಕೆಲಸ ಮಾಡುವ ಆಸೆ ಇದೆ. ರಾಮ್‌ಚರಣ್‌ಗೆ ಮದುವೆಯಾಗದೇ ಇದ್ದಿದ್ದರೆ ನಾನೇ ಖುದ್ದಾಗಿ ಡೇಟ್‌ಗೆ ಹೋಗೋಣವೇ ಎಂದು ಕೇಳುತ್ತಿದ್ದೆ. ಒಂದು ವೇಳೆ ಈಗಲೂ ರಾಮ್ ಚರಣ್ ನನ್ನೊಂದಿಗೆ ಡೇಟಿಂಗ್ ಮಾಡಲು ಒಪ್ಪಿಕೊಂಡರೆ, ನಾವು ಒಟ್ಟಿಗೆ ಸಿನಿಮಾ ನೋಡುತ್ತೇವೆ, ನಮ್ಮ ನೆಚ್ಚಿನ ಆಹಾರವನ್ನು ತಿನ್ನುತ್ತೇವೆ ಮತ್ತು ಇತರ ಹಲವು ವಿಷಯಗಳ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಆದರೆ ಈ ಸಂದರ್ಶನ ನೋಡಿದವರೆಲ್ಲಾ ಡೇಟಿಂಗ್‌ ಏನೋ ಆಗಲೀ, ಟ್ರೈ ಮಾಡಿದರೆ ರಾಮ್‌ ಚರಣ್‌ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

 

Share Post