Cinema

ತಮಿಳಿನ ಖ್ಯಾತ ಗಾಯಕರು – ಮಾಣಿಕ್ಯ ವಿನಾಯಗಂ ಇನ್ನಿಲ್ಲ

ಚೆನೈ : ತಮಿಳಿನ ಖ್ಯಾತ ಗಾಯಕ ಮತ್ತು ಜಾನಪದ ಕಲಾವಿದ ಮಾಣಿಕ್ಯ ವಿನಾಯಗಂ ಅವರು ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಾಣಿಕ್ಯ ಅವರು ಭಾನುವಾರ ಅಸುನೀಗಿದರು. ಅವರಿಗೆ ೭೮ ವರ್ಷ ವಯಸ್ಸಾಗಿತ್ತು. ನರ್ತಕಿ ವಜುವೂರ್ ಬಿ ರಾಮಯ್ಯ ಪಿಳ್ಳೈ ಪುತ್ರರಾಗಿರುವ ಮಾಣಿಕ್ಯ ವಿನಾಯಗಂ ತಮಿಳುನಾಡಿನ ಜನಪ್ರಿಯ ಜಾನಪದ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.

ಸುಮಾರು ೮೦೦ಕ್ಕೂ ಹೆಚ್ಚು ಹಾಡುಗಳಿಗೆ ಮಾಣಿಕ್ಯ ಅವರು ಧ್ವನಿಯಾಗಿದ್ದರು. ಅಲ್ಲದೇ ತಿರುಡಾ ತಿರುಡಿ, ವೆಟ್ಟೈಕಾರನ್, ಸಂತೋಷ್ ಮತ್ತು ಸುಬ್ರಮಣ್ಯಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಶರತ್‌ಕುಮಾರ್‌ ಮತ್ತು ಮನೋಬಾಲಾ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Share Post