Cinema

ನಾನಿಯೊಂದಿಗೆ ಕೃತಿ ಶೆಟ್ಟಿ ಲಿಪ್‌ಲಾಕ್‌: ಹಾಟ್‌ ಫೋಟೊ ಔಟ್

ಹೈದರಾಬಾದ್:‌ ಉಪ್ಪೆನ ಸಿನಿಮಾ ನಂತರ ನಟ ನಾನಿಗೆ ಲಿಪ್‌ಲಾಕ್‌ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ ನಟಿ ಕೃತಿ ಶೆಟ್ಟಿ. ಹೌದು ನ್ಯಾಚುರಲ್‌ ಸ್ಟಾರ್‌ ನಾನಿ ಮತ್ತು ಕನ್ನಡದ ಕೃತಿ ಶೆಟ್ಟಿ ಅಭಿನಯದ ಶ್ಯಾಮ ಸಿಂಗ್‌ರಾಯ್‌ ಸಿನಿಮಾ ಇದೇ ಡಿಸೆಂಬರ್‌ ೨೪ಕ್ಕೆ ತೆರೆಕಾಣಲಿದೆ. ಇತ್ತೇಚೆಗೆ ಈ ಸಿನಿಮಾದ ಟ್ರೀಲರ್‌ ಕೂಡ ರಿಲೀಸ್‌ ಮಾಡಿದ್ದಾರೆ. ಇದ್ರಲ್ಲಿ ನಟನಿಗೆ ಕೃತಿ ಶೆಟ್ಟಿ ಕಿಸ್‌ ಮಾಡಿ ರೊಮ್ಯಾನ್ಸ್‌ ಮಾಡಿದ್ದಾರೆ. ಈ ಸೀನ್‌ಗಳ ಬಗ್ಗೆ ಅಭಿಮಾನಿಗಳು ಬೇರೆ ಮಾತುಗಳನ್ನೇ ಅಡಿದ್ದಾರೆ. ಸಿನಿಮಾ ಟ್ರೇಲರ್‌ ಹೀಗಿದ್ರೆ ಇನ್ನು ಸಿನಿಮಾ ಇನ್ನು ಯಾವ ರೇಂಜ್‌ಗೆ ಇರಬಹುದೆಂಬ ಮಾತುಗಳು ಹರಿದಾಡುತ್ತಿವೆ. ಇನ್ನು 20ವರ್ಷ ದಾಟದ ಕೃತಿಶೆಟ್ಟಿ ಸಿನಿಮಾಗಳಲ್ಲಿ ಈ ರೀತಿ ನಟನೆ ಮಾಡ್ತಿರುವುದನ್ನು ಕಂಡು ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಈ ಸಿನಿಮಾ ಬಳಿಕ ನಟಿ ಇಮೇಜ್‌ ಪೂರ್ತಿಯಾಗಿ ಬದಲಾಗುತ್ತೆ. ಟಾಪ್‌ ನಟಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಅಂತಿದಾರೆ ಪ್ರೇಕ್ಷಕರು. ಉಪ್ಪೆನ ಸಿನಿಮಾ ಬಳಿಕ ರಾತ್ರೋ ರಾತ್ರಿ ಸ್ಟಾರ್‌ ಹಿರೋಯಿನ್‌ ಪಟ್ಟ ಪಡೆದ ಕೃತಿ ಶೆಟ್ಟಿ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ತನ್ನ ಅಭಿನಯ, ನಗು, ಕಣ್ಸನ್ನೆ ಮೂಲಕ ಯುವಕರ ಮನಸನ್ನು ಗೆದ್ದಿದ್ದಾರೆ. ಶ್ಯಾಮ ಸಿಂಗ್‌ರಾಯ್‌ ಸಿನಿಮಾ ಮುಗಿದ ಬಳಿಕ ಬಂಗಾರ್ರಾಜು, ಆ ಅಮ್ಮಾಯಿ ಗುರುಂಚಿ ಚೆಪ್ಪಾಲಿ, ಎಂಬ ಸಿನಿಮಾಗಳಿಗೆ ಸಹಿ ಮಾಡಿದ್ದಾರಂತೆ.

Share Post