Cinema

ಸಾವಿರ ಕೋಟಿ ಕ್ಲಬ್​​ ಸೇರಿದ ಕೆಜಿಎಫ್​​ 2: ಹಿಂದಿಯಲ್ಲೇ 416 ಕೋಟಿ ರೂ. ಗಳಿಕೆ

ಬೆಂಗಳೂರು; ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಕೆಜಿಎಫ್​ – 2 ಹೊಸದೊಂದು ದಾಖಲೆ ಬರೆದಿದೆ. ಈ ಚಿತ್ರ ಸಾವಿರ ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಚಿತ್ರ ಬಿಡುಗಡೆಯಾ

     ಕನ್ನಡ ಚಿತ್ರರಂಗದಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್​ ಚಾಪ್ಟರ್​ 2 ಪಾತ್ರವಾಗಿದೆ. ಇಲ್ಲಿಯವರೆಗೂ ಪ್ರಪಂಚದಾದ್ಯಂತ ಸಾವಿರ ಕೋಟಿಗೂ ಅಧಿಕ ಮೊತ್ತ ಗಳಿಸಿದೆ. ಹಿಂದಿ ಅವರತರಣಿಕೆಯಿಂದಲೇ ಬರೋಬ್ಬರಿ 416.60 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ  ಪ್ರಶಾಂತ್ ನೀಲ್​ ನಿರ್ದೇಶನದ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಕೆಲವೇ ಚಿತ್ರಗಳ ಸಾಧನೆಯ ಪಟ್ಟಿಗೆ ಸಹ ಸೇರಿಕೊಂಡಿದೆ.

  ಭಾರತೀಯ ಚಿತ್ರರಂಗದಲ್ಲಿ ದಂಗಲ್​, ಬಾಹುಬಲಿ 2 ಹಾಗೂ ಆರ್​ಆರ್​ಆರ್ ಮಾತ್ರ ಸಾವಿರ ಕೋಟಿ ಕ್ಲಬ್​ ಸೇರಿದ್ದು, ಇದೀಗ ಆ ಸಾಲಿನಲ್ಲಿ ಕನ್ನಡದ ಚಿತ್ರವೊಂದು ಸೇರ್ಪಡೆಯಾಗಿದೆ.

Share Post