CinemaNational

ಜಾಕ್ವೆಲಿನ್‌ನ ಮರೆಯುತ್ತಿಲ್ಲ ಸುಕೇಶ್‌ ಚಂದ್ರಶೇಖರ್‌; ಜೈಲಿನಿಂದಲೇ ಪ್ರೇಮಪತ್ರ

ನವದೆಹಲಿ; ಇನ್ನೂರು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಆರೋಪದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌, ತನ್ನ ಈ ಹಿಂದಿನ ಗೆಳತಿ, ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಳನ್ನು ಮರೆಯೋ ಸ್ಥಿತಿಯಲ್ಲಿಲ್ಲ. ಆಕೆಯನ್ನು ಸುಕೇಶ್‌ ಜೈಲಿನಲ್ಲಿದ್ದರೂ ಬೆನ್ನುಬಿದ್ದಿದ್ದಾನೆ. ಈಗ ಕ್ರಿಸ್‌ಮಸ್‌ ಸಂದರ್ಭದಲ್ಲಿ ಸುಕೇಶ್‌, ಜಾಕ್ವೆಲಿನ್‌ಗೆ ಲವ್‌ ಲೆಟರ್‌ ಕಳುಹಿಸಿದ್ದಾರೆ. ಅದರಲ್ಲಿ ಸುಕೇಶ್‌ ತನ್ನಹಸ್ತಾಕ್ಷರಗಳಲ್ಲಿ ಲವ್‌, ಬೇಬಿ ಎಂದೆಲ್ಲಾ ಬರೆದು, ಜಾಕ್ವೆಲಿನ್‌ಗೆ ಕಳುಹಿಸಿದ್ದಾನೆ.

‘ಬೇಬಿ ನಿನ್ನ ಬಗ್ಗೆ ನನಗೆ ಖುಷಿ, ಹೆಮ್ಮೆ ಇದೆ. ಚಿತ್ರರಂಗಕ್ಕೆ ನೀನು ನೀಡಿರುವ ಕೊಡುಗೆ ಹಿನ್ನೆಲೆಯಲ್ಲಿ DIAFA ಅವಾರ್ಡ್ ಸಿಕ್ಕಿದೆ. ಇದಕ್ಕೆ ನಿನಗೆ ಅಭಿನಂದನೆ. ಇದರಿಂದ ನನಗೆ ಎಷ್ಟು ಖುಷಿ ಆಗಿದೆ ಅಂದ್ರೆ ಅದನ್ನು ಹೇಳೋದಕ್ಕೆ ಸಾಧ್ಯವೇ ಇಲ್ಲ.  ನೀನು ಗ್ರೇಟ್ ಪರ್ಫಾರ್ಮರ್. ಬಿಳಿ ಗೌನ್​ನಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತೀಯ’ ಎಂದು ಸುಕೇಶ್ ಪತ್ರದಲ್ಲಿ ಬರೆದುಕೊಂಡಿದ್ದಾನೆ.

ನೀನು ನನ್ನ ಹೃದಯ ಕದ್ದಿದ್ದೀಯ. ಜಗತ್ತಿನಲ್ಲಿರುವ ಏಕೈಕ ಜೀವಂತ ಏಂಜಲ್‌ ನೀನು ಅಂತಾನೂ ಸುಕೇಶ್‌ ಬರೆದಿದ್ದಾರೆ.

 

Share Post