ಅಪ್ಪನ ಬಳಿ ಹೋದರೆ ರಪರಪ ಅಂತ ಹೊಡೆಯುತ್ತಾರೆ; ಯೋಗೇಶ್ವರ್ ಮಗಳು ನಿಶಾ ಅಳಲು
ಬೆಂಗಳೂರು; ನಾನು ಯೋಗೇಶ್ವರ್ ಮಗಳು. ಆದ್ರೆ ನನಗೆ 24 ವರ್ಷಗಳಿಂದ ತಂದೆಯ ಪ್ರೀತಿ ಸಿಕ್ಕಿಲ್ಲ.. ಮನೆಗೆ ಹೋದರೆ ರಪರಪ ಅಂತ ಹೊಡೆಯುತ್ತಾರೆ.. ಏನಾದರೂ ಕೇಳಿದರೆ ಇಲ್ಲ ಬರಬೇಡ ನೀನು, ಬೇಕಾದರೆ ಭಿಕ್ಷೆ ಬೇಡಿ ಜೀವನ ಮಾಡು ಎನ್ನುತ್ತಾರೆ ಎಂದು ಸಿ.ಪಿ.ಯೋಗೇಶ್ವರ್ ಮಗಳು ನಿಶಾ ಯೋಗೇಶ್ವರ್ ಅಳಲು ತೋಡಿಕೊಂಡಿದ್ದಾರೆ… ಈ ಬಗ್ಗೆ ಅವರು ವಿಡಿಯೋವೊಂದನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ..
ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಲು ಮುಂದಾಗಿದ್ದರು.. ಇದಾದ ನಂತರ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ನೀನು ನಿಮ್ಮ ಹೆಸರಿನ ಪಕ್ಕ ಇರುವ ಯೋಗೇಶ್ವರ್ ಹೆಸರು ತೆಗೆದು ಹಾಕು ಎಂದು ಕಮೆಂಟ್ ಮಾಡಿದ್ದಾರೆ.. ಇದಕ್ಕೆ ನಿಶಾ ಯೋಗೇಶ್ವರ್ ಪ್ರತ್ಯುತ್ತರ ನೀಡಿದ್ದಾರೆ.. ಯೋಗೇಶ್ವರ್ ಅವರು ನನ್ನ ತಂದೆ.. ಅದು ದೇವರ ನಿರ್ಧಾರ.. ಅದನ್ನು ಹೇಗೆ ತೆಗೆಯೋದು.. ನೀವು ಯಾರ್ಯಾರು ನನ್ನ ವಿರುದ್ಧ ಮಾತನಾಡತ್ತಿದ್ದೀರಿ ಎಂದು ಗೊತ್ತಿದೆ.. ನೀವೆಲ್ಲಾ ಬನ್ನಿ, ನನ್ನ ತಂದೆಯ ಹೆಸರನ್ನು ಹೇಗೆ ತೆಗೆಯುವುದು ಎಂಬುದನ್ನು ತೋರಿಸಿ ಎಂದು ಆಹ್ವಾನ ಕೊಟ್ಟಿದ್ದಾರೆ..
ರಾಮಾಯಣದ ಕಥೆ ಹೇಳುತ್ತಾ ತಮ್ಮ ಕುಟುಂಬದ ಜಗಳದ ಬಗ್ಗೆ ನಿಶಾ ಯೋಗೇಶ್ವರ್ ಮಾತನಾಡಿದ್ದಾರೆ.. ನಾನು 24 ವರ್ಷಗಳಿಂದ ತಂದೆಯಿಂದ ದೂರ ಇದ್ದೇನೆ.. ನಮ್ಮ ಚಿಕ್ಕಮ್ಮನ ಮಗಳು ನಮ್ಮ ತಂದೆ ಜೊತೆ ಇದ್ದಾಳೆ.. ಆದ್ರೆ ಸ್ವಂತ ಮಗಳಾದ ನಾನು ತಂದೆಯಿಂದ ದೂರ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ..
ನಮ್ಮಪ್ಪ ಚುನಾವಣೆಗೆ ನಿಂತಾಗಿ ಪ್ರಚಾರಕ್ಕೆ ನನ್ನನ್ನು ಕರೆಯುತ್ತಿದ್ದರು.. ಆಗೆಲ್ಲಾ ನಾನು ಹೋಗುತ್ತಿದ್ದೆ.. ಊರೂರು ಸುತ್ತಿ ಪ್ರಚಾರ ಮಾಡುತ್ತಿದ್ದೆ.. ಆಗೆಲ್ಲಾ ನಾನು ಅವರಿಗೆ ಆದರ್ಶ ಮಗಳಾಗಿದ್ದೆ.. ಈಗ ಯಾಕೆ ನಾನು ಬೇಡವಾಗಿದ್ದೇನೆ ಎಂದು ನಿಶಾ ಯೋಗೇಶ್ವರ್ ಪ್ರಶ್ನೆ ಮಾಡಿದ್ದಾರೆ..