Cinema

ದೀಪಿಕಾ ಪಡುಕೋಣೆಗೆ ಜ್ಯೂನಿಯರ್‌ ಎನ್‌ಟಿಆರ್‌ ಜೊತೆ ನಟಿಸಲು ಇಷ್ಟವಂತೆ..!

ಮುಂಬೈ: ಬಾಲಿವುಡ್‌ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ತೆಲುಗಿನ ಖ್ಯಾತ ನಟ ಜ್ಯೂನಿಯರ್‌ ಎನ್‌ಟಿಆರ್‌ ಜೊತೆ ನಟಿಸಲು ಇಷ್ಟವಂತೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಅವರು ಈ ಮಾತನ್ನು ಹೇಳಿದ್ದಾರೆ.

ನೀವು ಯಾವ ನಟು ಹಾಗೂ ಯಾವ ನಿರ್ದೇಶಕ ಜೊತೆ ಕೆಲಸ ಮಾಡಬಯಸುತ್ತೀರಿ ಎಂದು ಕೇಳಿದ್ದಕ್ಕೆ, ಎನ್‌ಟಿಆರ್‌ ಹೆಸರನ್ನು ಹೇಳಿದ್ದಾರೆ. ತೆಲುಗಿನ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಅಲ್ಲು ಅರ್ಜುನ್‌ ಜೊತೆ ನಟಿನೆ ಮಾಡೋದಕ್ಕೆ ನಾನು ಇಷ್ಟಪಡುತ್ತೇನೆ. ಅದ್ರಲ್ಲೂ ಜ್ಯೂನಿಯರ್‌ ಎನ್‌ಟಿಆರ್‌ ಅವರ ವ್ಯಕ್ತಿತ್ವ ನನಗೆ ತುಂಬಾ ಇಷ್ಟವಾಯಿತು ಎಂದು ದೀಪಿಕಾ ಹೇಳಿದ್ದಾರೆ.

ಇನ್ನು ಅಯಾನ್‌ ಮುಖರ್ಜಿ ಹಾಗೂ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದಕ್ಕೆ ನನಗೆ ಆಸಕ್ತಿ ಇದೆ ಎಂದು ದೀಪಿಕಾ ಪಡುಕೋಣೆ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

 

 

 

Share Post