Cinema

ಬಿಕಿನಿ ತೊಟ್ಟ ಡಿಂಪಲ್ ಕ್ವೀನ್ ದೀಪಿಕಾ, ನೆಟ್ಟಿಗರು ಏನ್‌ ಹೇಳುತ್ತಿದ್ದಾರೆ ಗೊತ್ತಾ?

ಬಾಲಿವುಡ್‌: ದೀಪಿಕಾ ಪಡುಕೋಣೆ ಮದುವೆ ಬಳಿಕವೂ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೆ ಅವರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದೆ.
ಕೇವಲ ಒಂದು ತಿಂಗಳ ಅಂತರದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಲಿವೆ. ಇದೇ ವಾರ ಪತಿ ರಣ್‌ವೀರ್ ಸಿಂಗ್ ಜೊತೆ ನಟಿಸಿದ 83 ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ದಿಢೀರನೇ ಸದ್ದು ಮಾಡುವುದಕ್ಕೆ ಶುರುಮಾಡಿದೆ. ಹೊಸ ಸಿನಿಮಾ ಗೆಹರಾಯಿಯಾ ರಿಲೀಸ್ ಆಗುತ್ತಿದೆ.ಸದ್ದೇ ಇಲ್ಲದೆ ದಿಢೀರನೇ ಚಿತ್ರತಂಡ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಆದರೆ, ಈ ಸಿನಿಮಾ ಬಿಡುಗಡೆಗಿಂತ ದೀಪಿಕಾ ಪಡುಕೋಣೆಯ ಬಿಕಿನಿ ತೊಟ್ಟು ಅಭಿಮಾನಿಗಳ ಮುಂದೆ ಕಾಣಿಸಿಕೊಂಡೊದ್ದಾರೆ. ಇದನ್ನು ಕಂಡು ಅಭಿಮಾನಿಗಳು ಫುಲ್‌ ಥ್ರಿಲ್‌ ಆಗಿದ್ದಾರೆ. ಅಲ್ಲದೆ ಯುವನಟನಿಗೆ ಮುತ್ತಿಟ್ಟ ದೃಶ್ಯ ಕೂಡ ಭಾರಿ ಸದ್ದು ಮಾಡುತ್ತಿದೆ.ಗೆಹರಾಯಿಯಾ ಸಿನಿಮಾದ ಕೆಲವು ಮೇಕಿಂಗ್ ಫೋಟೊಗಳನ್ನು ಸ್ವತ: ದೀಪಿಕಾ ಶೇರ್ ಮಾಡಿಕೊಂಡಿದ್ದರು. ಬಾಲಿವುಡ್ ಯುವನಟ ಸಿದ್ಧಾಂತ್ ಚತುರ್ವೇದಿ ಜೊತೆ ಬಿಕಿನಿಯಲ್ಲಿ ಕೂತಿದ್ದ ಪೋಟೊಗಳನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಶಕುನ್ ಬತ್ರಾ ನಿರ್ದೇಶಿಸಿದ ಗೆಹರಾಯಿಯಾ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ದಾಂತ್ ಜೊತೆ ಅನನ್ಯ ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಸಿರುದ್ದೀನ್ ಶಾ, ಧೈರ್ಯ ಕರ್ವ ಕೂಡ ನಟಿಸಿದ್ದಾರೆ.

 

Share Post