Cinema

ಡಿ.17ಕ್ಕೆ ಪುಷ್ಪ ರಿಲೀಸ್‌ : 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಅಲ್ಲು ಅರ್ಜುನ್‌ ಚಿತ್ರ

ಬೆಂಗಳೂರು : ಖ್ಯಾತ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಅಭಿನಯದ ಬಹು ನಿರೀಕ್ಷಿತ ಪುಷ್ಪ ಸಿನಿಮಾ ಡಿಸೆಂಬರ್‌ 17 ರಂದು ತೆರೆಗೆ ಬರಲು ಸಿದ್ಧವಾಗಿದೆ. ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಈ ಸಿನಿಮಾದ ನಿರ್ದೇಶಕರು ಆರ್ಯ ಖ್ಯಾತಿಯ ಸುಕುಮಾರ್‌. ಈ  ಪುಷ್ಪ ಸಿನಿಮಾ ಎರಡು ಸೀಕ್ವೆಲ್‌ನಲ್ಲಿ ಬರಲಿದೆಯಂತೆ.

ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಲಿದ್ದಾರೆ. ಇಂದು ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.

Share Post