ತಿರುಪತಿಯಲ್ಲೇ ಮದುವೆ ಆಗ್ತೀನಿ ಎಂದು ಬಾಹುಬಲಿ ಖ್ಯಾತಿಯ ಪ್ರಭಾಸ್
ತಿರುಪತಿ; ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮದುವೆ ಯಾವಾಗ ಎಂಬುದರ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಅದಕ್ಕೆ ಈಗ ಪ್ರಭಾಸ್ ಅವರೇ ಉತ್ತರ ಕೊಟ್ಟಿದ್ದಾರೆ. ನಾನು ತಿರುಪತಿಯಲ್ಲೇ ಮದುವೆಯಾಗುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಅವರು ನಟಿಸಿರುವ ಆದಿಪುರುಷ್ ಸಿನಿಮಾದ ಪ್ರಿರಿಲೀಸ್ ಇವೆಂಟ್ ನಿನ್ನೆ ತಿರುಪತಿಯಲ್ಲಿ ನಡೆಯಿತು. ಈ ವೇಳೆ ಅಭಿಮಾನಿಗಳು ಮದುವೆ ಯಾವಾಗ ಎಂದು ಕೇಳಿದರು. ಮದುವೆಗೆ ಕಾಲ ಕೂಡಿ ಬರಲಿ. ಆಗ ತಿರುಪತಿಯಲ್ಲೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಪ್ರಭಾಸ್ ಹೇಳಿದ್ದಾರೆ. ಆದ್ರೆ, ಮದುವೆ ಯಾವಾಗ ಅನ್ನೋದನ್ನ ಮಾತ್ರ ಹೇಳಿಲ್ಲ.