CinemaNational

ನಟ ರಾಮ್‌ ಪೋತಿನೇನಿ ಜೊತೆ ಮದುವೆಯಾಗ್ತಾರಂತೆ ಅನುಪಮಾ ಪರಮೇಶ್ವರನ್‌

ಹೈದರಾಬಾದ್‌; ತೆಲುಗಿನಲ್ಲಿ ಹೆಸರು ಮಾಡಿದ ಯುವ ನಟರಲ್ಲಿ ರಾಮ್‌ ಪೋತಿನೇನಿ ಕೂಡಾ ಒಬ್ಬರು. ಇವರ ಹಲವಾರು ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದು, ಕೊಂಚ ಸಮಯದಲ್ಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇನ್ನು ಪ್ರೇಮಂ ಸಿನಿಮಾದ ಮೂಲಕ ನಟಿ ಅನುಪಮಾ ಪರಮೇಶ್ವರನ್‌ ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇವರಿಬ್ಬರೂ ಈಗ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಟಾಲಿವುಡ್‌ನಲ್ಲಿ ಗುಸುಗುಸು ಶುರುವಾಗಿದೆ. ಎರಡೂ ಕುಟುಂಬದ ಹಿರಿಯರು ಈ ಮದುವೆಗೆ ಒಪ್ಪಿದ್ದು, ಮದುವೆಗೆ ಈಗಾಗಲೇ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಯಾರೂ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಅಂದಹಾಗೆ ಕೆಲ ತಿಂಗಳ ಹಿಂದೆ ಕ್ರಿಕೆಟರ್‌ ಜಸ್ಟ್ರಿತ್‌ ಬುಮ್ರಾ ಅವರ ಜೊತೆ ಅನುಪಮಾ ವಿವಾಹವಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಈ ಸುದ್ದಿ ಸುಳ್ಳು ಎಂದು ಅನುಪಮಾ ಹೇಳಿದ್ದರು. ಇನ್ನು 2018ರಲ್ಲಿ ಹಲೋ ಗುರು ಪ್ರೇಮಕೋಸಮೇ ಸಿನಿಮಾದಲ್ಲಿ ರಾಮ್‌ ಹಾಗೂ ಅನುಪಮಾ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಶೂಟಿಂಗ್‌ ವೇಳೆಯೇ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ.

 

Share Post