Cinema

ನಟಿ ಅಮೂಲ್ಯ‌ರ ಬೇಬಿ ಬಂಪ್‌ ಫೋಟೋಶೂಟ್

ಬೆಂಗಳೂರು : ಸ್ಯಾಂಡಲ್ವುಡ್‌ಗೆ ಬಾಲನಟಿಯಾಗಿ ಎಂಟ್ರಿಕೊಟ್ಟ ಅಮೂಲ್ಯ ಸಿನಿಮಾ ನಾಯಕಿಯಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ನಂತರ 2017ರಲ್ಲಿ ವಿವಾಹ ಮಾಡಿಕೊಂಡಿದ್ದ ನಟಿ ಇತ್ತೀಚೆಗೆ ತಾವು ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು.

ಮೊದಲ ಮಗುವಿನ ನೀರಿಕ್ಷೆಯಲ್ಲಿರುವ ಅಮೂಲ್ಯ ಈಗ ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿರುವ ಫೋಟೋಗೆ ಸಖತ್‌ ರೆಸ್ಪಾನ್ಸ್‌ ಬರ್ತಿದೆ. ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ.

ಅಮೂಲ್ಯ ಮದುವೆಯಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರೇ ಖುದ್ದು ಓಡಾಡಿಕೊಂಡು ಮದುವೆ ಮಾಡಿದ್ದರು.

Share Post