CinemaNational

ಕ್ಯಾನ್ಸರ್‌ ಗೆದ್ದು ಹೃದಯಾಘಾತಕ್ಕೆ ಬಲಿಯಾದ ಖ್ಯಾತ ನಟಿ ಐಂದ್ರಿಲಾ

ಕೋಲ್ಕತ್ತಾ; ಕ್ಯಾನ್ಸರ್‌ ಗೆದ್ದಿದ್ದ ಖ್ಯಾತ ಬಂಗಾಲಿ ನಟಿ ಐಂದ್ರಿಲಾ ಶರ್ಮಾ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಳೆದ ರಾತ್ರಿ ಅವರು ಹೃದಯಾಘಾತಕ್ಕೊಳಗಾಗಿದ್ದು, ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ಐಂದ್ರಿಲಾ ಶರ್ಮಾ ಅವರು ಹಲವಾರು ಧಾರಾವಾಹಿಗಳಲ್ಲಿ ಮಿಂಚಿದ್ದರು. ಈ ನಡುವೆ ಅವರಿಗೆ ಕ್ಯಾನ್ಸರ್‌ ವಕ್ಕರಿಸಿತ್ತು. ಸೂಕ್ತ ಚಿಕಿತ್ಸೆ ಪಡೆದು ಅವರು ಅದನ್ನು ಗೆದ್ದಿದ್ದರು. ಆದ್ರೆ ಕಳೆದ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದಾರೆ. ಅವರನ್ನು  ಆಸ್ಪತ್ರೆಗೆ ದಾಖಲಿಸುತ್ತಿದ್ದಂರೆ ಸಿಪಿಆರ್ ಮಾಡಲಾಯಿತು. ಆದರೆ ಐಂದ್ರಿಲಾ ದೇಹ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಅವರನ್ನು ವೆಂಟಿಲೇಟರ್ ಬೆಂಬಲಕ್ಕೆ ಇರಿಸಲಾಗಿತ್ತು.

ಐಂದ್ರಿಲಾ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬಂಗಾಲಿ ಕಿರುತೆರೆ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ.

Share Post