ಮತ್ತೆ ಮುಂದೆ ಹೋಗುತ್ತಾ ʼಸರ್ಕಾರು ವಾರಿ ಪಾಟʼ ?
ಹೈದರಾಬಾದ : ತಲುಗು ನಟ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನಿಮಾ ರಿಲೀಸ್ಗೆ ಸಜ್ಜಾಗಿತ್ತು. ಆರ್ ಆರ್ ಆರ್ ಸಿನಿಮಾ ಸಲುವಾಗಿ ತಮ್ಮ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿ ಕೊಂಡಿತ್ತು ಸಿನಿಮಾ ತಂಡ. ಈಗ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಸಿನಿಮಾ ಸರ್ಕಾರು ವಾರಿ ಪಾಟ ತನ್ನ ರಿಲೀಸ್ ದಿನಾಂಕವನ್ನು ಮತ್ತೊಮ್ಮೆ ಮುಂದಕ್ಕೆ ಹಾಕಲಿದ್ದಾರೆ ಎಂದು ವರದಿಯಾಗಿದೆ.
ಲೆಕ್ಕಾಚಾರವಾಗಿ ಇಂದು ಅಂದರೆ ಜನವರಿ 13ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ RRR ಸಿನಿಮಾಗೆ ಅವಕಾಶ ಮಾಡಿಕೊಟ್ಟು ಇವರು ಸಿನಿಮಾ ಬಿಡುಗಡೆಯನ್ನು ಏಪ್ರಿಲ್ ೧ಕ್ಕೆ ಮುಂದೂಡಿದ್ದರು.
ಕೋವಿಡ್ ಹೆಚ್ಚಳದಿಂದ ರಾಜ್ಯ ಸರ್ಕಾರಗಳು ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ವಿಧಿಸುತ್ತಿದೆ. ಈ ಕಾರಣದಿಂದ RRR ಸಿನಿಮಾ ಮತ್ತು ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾ ಕೂಡ ತೆರೆ ಕಾಣಲಿಲ್ಲ. ಕೊರೊನಾ ಮೂರನೆ ಅಲೆ ಕಡಿಮೆ ಆದ ನಂತರ ಥಿಯೇಟರ್ಗೆ ಬರುವುದಾಗಿ ಹೇಳುತ್ತಿವೆ. ತಜ್ಞರ ವರದಿ ಪ್ರಕಾರ ಧಿಯೇಟರ್ಗಳು ಎಂದಿನಂತೆ ಕೆಲಸ ಮಾಡಲು ಏಪ್ರಿಲ್ವರೆಗೂ ಕಾಯಲೇಬೇಕು.
ಎಲ್ಲಾ ಬಿಗ್ ಬಜೆಟ್ ಸಿನಿಮಾಗಳು ಕೂಡ ಏಪ್ರಿಲ್ನಲ್ಲಿ ರಿಲೀಸ್ ಆಗಲು ತಯಾರಿ ನಡೆಸಲಿವೆ. ಇದರ ನಡುವೆ ಮಹೇಶ್ ಬಾಬು ಅವರ ಸಿನಿಮಾ ಏಪ್ರಿಲ್ ನಂತರ ರಿಲೀಸ್ ಮಾಡುವ ಆಲೋಚನೆ ನಡೆಸಿದೆ. ಎಲ್ಲವೂ ಕೋವಿಡ್ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ.