BengaluruCrime

ಮೂರ್ಛೆ ಬಂದವರಂತೆ ಆಡಿದ ಯೂಟ್ಯೂಬರ್‌; ಜನ ಏನು ಮಾಡಿದ್ರು ಗೊತ್ತಾ..?

ಬೆಂಗಳೂರು; ವ್ಯೂವ್ಸ್‌ ಜಾಸ್ತಿ ಬರಲೆಂದು ಯೂಟ್ಯೂಬರ್‌ಗಳು ನಾನಾ ನಾಟಕಗಳನ್ನು ಮಾಡುತ್ತಾರೆ. ಜನರ ಮುಂದೆ ಹುಚ್ಚಾಟಗಳನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ಯೂಟ್ಯೂಬರ್‌ ಒಬ್ಬ ಹುಚ್ಚಾಟ ನಡೆಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಒಬ್ಬ ಮೂರ್ಛೆ ಬಂದವನಂತೆ ಆಡಿದ್ದು, ಪ್ರಯಾಣಿಕರು ಅದನ್ನು ನೋಡಿ ಬೆಚ್ಚಬಿದ್ದಿದ್ದಾರೆ. ಜನರಿಗೆ ಪ್ರಾಂಕ್‌ ಮಾಡಲು ಆತ ರೀತಿ ಮಾಡಿದ್ದಾನೆ. ಇನ್ನೊಂದೆಡೆ ಎಸ್ಕಲೇಟರ್‌ ಮೇಲೂ ವೃದ್ಧೆಯೊಬ್ಬರ ಮುಂದೆ ಪ್ರಾಂಕ್‌ ಮಾಡಿದ್ದಾನೆ.

ವಿಜಯನಗರದಿಂದ ಮೆಜೆಸ್ಟಿಕ್‌ಗೆ ಬರುವ ಪರ್ಪಲ್ ಲೈನ್‌ ಮೆಟ್ರೋದಲ್ಲಿ ಈ ರೀತಿಯ ಘಟನೆ ನಡೆದಿದೆ. ಪ್ರ್ಯಾಂಕ್‌ ಪ್ರಜ್ಜು ಎಂಬ ಯೂಟ್ಯೂಬ್‌ ಚಾನೆಲ್‌ ನಡೆಸುವಾತನೇ ಈ ಪ್ರಾಂಕ್‌ ಮಾಡಿರೋದು ಅಂತ ತಿಳಿದು ಬಂದಿದೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆತನ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

 

Share Post