Bengaluru

ಮಹಿಳಾ ದಿನಾಚರಣೆ ಹಿನ್ನೆಲೆ; ಬಿಎಂಟಿಸಿಯಲ್ಲಿ ನಾಳೆ ಮಹಿಳೆಯರಿಗೆ ಉಚಿತ ಪ್ರಯಾಣ

ಬೆಂಗಳೂರು; ನಾಳೆ ಮಹಿಳಾ ದಿನಾಚರಣೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ನಾಳೆ ಮಹಿಳೆಯರಿಗೆ ಒಳ್ಳೆ ಆಫರ್‌ ನೀಡಿದೆ. ನಾಳೆ ಬಿಎಂಟಿಸಿ ಬಸ್‌ನಲ್ಲಿ ಓಡಾಡುವ ಮಹಿಳೆಯರು ಪ್ರಯಾಣ ದರ ಪಾವತಿಸುವಂತಿಲ್ಲ. ಬಿಎಂಟಿಸಿ ಈ ಆಫರ್‌ನ್ನು ಪ್ರಕಟ ಮಾಡಿದೆ.

ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿವರೆಗೆ ಈ ಆಫರ್‌ ಜಾರಿಯಲ್ಲಿರಲಿದೆ. ನಾಳೆ ಪೂರ್ತಿ ಮಹಿಳೆಯರು ಉಚಿತವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಎಲ್ಲಿಗೆ ಬೇಕಾದರೂ ಓಡಾಡಬಹುದಾಗಿದೆ.

Share Post