2 ಸಾವಿರ ರೂ. ನೋಟುಗಳು ಬ್ಯಾನ್; ಸೆ.30ರೊಳಗೆ ಬದಲಿಸಿಕೊಳ್ಳಿ
ನವದೆಹಲಿ; ದೇಶದ ಜನಕ್ಕೆ ಮತ್ತೊಂದು ನೋಟ್ ಬ್ಯಾನ್ ಶಾಕ್ ನೀಡಿದೆ ಆರ್‌ಬಿಐ. ಎರಡು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಲಾಗಿದ್ದು, ಸೆಪ್ಟೆಂಬರ್ 30 ರೊಳಗೆ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಮೇ 23ರಿಂದ ಎರಡು ಸಾವಿರ ರೂಪಾಯಿ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶವಿದೆ. ಒಮ್ಮೆಗೆ 20 ಸಾವಿರ ರೂಪಾಯಿ ಮೂತ್ರ ಬದಲಿಸಿಕೊಳ್ಳಲು ಅವಕಾಶವಿದೆ. ಹಲವು ವರ್ಷಗಳಿಂದ ಎರಡು ಸಾವಿರ ರೂಪಾಯಿ ನೋಟುಗಳ ಮುದ್ರಣ ನಿಲ್ಲಿಸಲಾಗಿತ್ತು. ಜೊತೆಗೆ ಬ್ಯಾಂಕ್‌ಗಳಿಂದ ಎರಡು ಸಾವಿರ ರೂಪಾಯಿ ನೋಡುಗಳನ್ನು ನೀಡಲಾಗುತ್ತಿರಲಿಲ್ಲ. ಹೀಗಾಗಿ ಮೂರು ನಾಲ್ಕು ವರ್ಷಗಳಿಂದ ಎರಡು ಸಾವಿರ ರೂಪಾಯಿ ನೋಟುಗಳು ಬ್ಯಾನ್ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದ್ರೆ ಈಗ ಅದು ನಿಜವಾಗಿದೆ.