ಕೃಷ್ಣಾ, ಕಾವೇರಿ ಜಲಾನಯನ ಸಮಸ್ಯೆ ಕುರಿತು ಇಂದು ವರ್ಚುವಲ್ ಸಭೆ
ಬೆಂಗಳೂರು: ಕೃಷ್ಣಾ ಮತ್ತು ಕಾವೇರಿ ನೀರಿನ ಜಲಾನಯನ ಸಮಸ್ಯೆಗಳನ್ನು ಕುರಿತು ಇಂದು ವರ್ಚುವಲ್ ಸಭೆ ನಡೆಸಲಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿಯವರು ತಮ್ಮ ಆರ್.ಟಿ.ನಗರದ ನಿವಾಸದ ಬಳಿ ತಿಳಿಸಿದ್ರು. ಕರ್ನಾಟಕ ನೀರಾವರಿ ವಿಚಾರದಲ್ಲಿ ಮಧ್ಯಸ್ಥರದ ರಾಜ್ಯವಾಗಿ ಹೊರಹೊಮ್ಮಿದೆ. ನಮ್ಮ ಮೇಲಿರುವ ರಾಜ್ಯ ಅಥವಾ ಕೆಳಗಿರುವ ರಾಜ್ಯಗಳಿಂದ ಸದಾ ಒಂದಿಲ್ಲೊಂದು ತಕರಾರು ಉಂಟಾಗುತ್ತಿದೆ. ಕೃಷ್ಣಾ ಬಚಾವತ್ ಅವಾರ್ಡ್ ನೋಟಿಪೀಕೇಷನ್ ಹೊರಡಿಸಬೇಕಿತ್ತು, ಸದ್ಯಕ್ಕೆ ಅದು ಸುಪ್ರೀಂಕೋರ್ಟ್‌ನಲ್ಲಿದೆ. ಮಹಾದಾಯಿ ಟ್ರಿಬ್ಯುನಲ್ ಆದೇಶ ಇದ್ದರೂ ಸಹ ಸುಪ್ರೀಂಕೋರ್ಟ್‌ನಲ್ಲಿ ತಕರಾರು ಅರ್ಜಿ ನಡೆಯುತ್ತಿದೆ. ಮೂರೂ ರಾಜ್ಯಗಳು ಕರ್ನಾಟಕ ಸೇರಿದಂತೆ ತಮ್ಮ ತಕರಾರುಗಳನ್ನು ಸುಪ್ರೀಂಕೋರ್ಟ್ ಮುಂದಿಡಲಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಟ್ರಿಬ್ಯುನಲ್ ಆದೇಶದಿಂದ ನೋಟಿಪೀಕೇಷನ್ ಆದೇಶ ನಡೆದರೂ ಸಹ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಇದರ ಬಗ್ಗೆ ದೆಹಲಿಯಲ್ಲಿ ಈಗಾಗಲೇ ಎರಡು ಮೂರು ಸಭೆಗಳನ್ನು ಮಾಡಿದ್ದೇವೆ. ಇಂದೂ ಸಹ ಕರೊನಾದಿಂದ ಕಾರಣದಿಂದಾಗಿ ವರ್ಚುವಲ್ ಸಭೆ ಮಾಡ್ತೀವಿ. ಜಲವಿವಾದವನ್ನು ನಾವು ಆದಷ್ಟು ಬೇಗ ಬಗೆಹರಿಸುವ ನಿಟಗ್ಟಿನಲ್ಲಿ ಗಂಭೀರವಾದ ತೀರ್ಮಾನ ತೆಗೆದುಕೊಳ್ತೇವೆ. ಇಂದಿನ ಸಭೆಯಲ್ಲಿ ದೆಹಲಿಯಿಂದ ಹಿರಿಯ ನ್ಯಾಯವಾದಿ, ನೀರಾವರಿ ತಾಂತ್ರಿಕ ತಜ್ಞರು ಭಾಗಿಯಾಗಲಿದ್ದಾರೆ ಎಂದು ಸಿಎಂ ತಿಳಿಸಿದ್ರು.