ರಮೇಶ್ ಜಾರಕಿಹೊಳಿ ಭೇಟಿ ಮಾಡಿದ ವಿಜಯೇಂದ್ರ; ಅಸಮಾಧಾನ ತಣಿಸುವ ಪ್ರಯತ್ನ
ಬೆಂಗಳೂರು; ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಹಲವರು ಅಪಸ್ವರ ಎತ್ತಿದ್ದಾರೆ. ಅದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡಾ ಒಬ್ಬರು. ಅಂದಹಾಗೆ ಅಸಮಾಧಾನ ಕೇಳಿ ಬರುತ್ತಿದ್ದಂತೆ ವಿಜಯೇಂದ್ರ ಅವರು ನೇರವಾಗಿ ಅಸಮಾಧಾನಿತರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವಾಗಿ ಇಂದು ವಿಜಯೇಂದ್ರ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ನಡೆಸಿ, ಅವರ ಬೇಸರ ಶಮನ ಮಾಡುವ ಕೆಲಸ ಮಾಡಿದರು.
ಜಾರಕಿಹೊಳಿ ನಿವಾಸದಲ್ಲೇ ಬ್ರೇಕ್‌ಫಾಸ್ಟ್ ಮಾಡಿದ ವಿಜಯೇಂದ್ರ, ಅನಂತರ ಮಾತನಾಡಿದರು. ಸಣ್ಣಪುಟ್ಟ ಅಸಮಾಧಾನ, ಗೊಂದಲಗಳಿದ್ದವು. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. 30 ನಿಮಿಷಗಳ ಕಾಲ ರಮೇಶ್ ಜಾರಕಿಹೊಳಿ ಜೊತೆ ಮುಕ್ತವಾಗಿ ಮಾತನಾಡಿದ್ದೇನೆ ಎಂದು ಹೇಳಿದರು.