ಬೆಂಗಳೂರಿನಲ್ಲಿ ಯುವತಿಯ ಭೀಕರ ಕೊಲೆ; 16 ಬಾರಿ ಚುಚ್ಚಿದ ಪಾಗಲ್ ಪ್ರೇಮಿ
ಬೆಂಗಳೂರು; ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಹದಿನಾರು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುರುಗೇಶ್ ಪಾಳ್ಯದ ಎನ್‌ಎಎಲ್ ರಸ್ತೆಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಲೀಲಾ ಪವಿತ್ರ ಎಂಬಾಕೆ ಸಾವಿಗೀಡಾಗಿದ್ದಾಳೆ.
ಲೀಲಾ ಪವಿತ್ರ ಅವರು ಆಂಧ್ರಪ್ರದೇಶ ಮೂಲದವರಾಗಿದ್ದು, ಒಮೆಗಾ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಿನಕರ್ ಹಾಗೂ ಲೀಲಾ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಕೆಲ ದಿನಗಳಿಂದ ಲೀಲಾ, ದಿನಕರನನ್ನು ದೂರ ಮಾಡಿದ್ದಳಂತೆ. ಇದರಿಂದ ರೊಚ್ಚಿಗೆದ್ದ ದಿನಕರ್ ಆಕೆಯನ್ನು ಕೊಲೆ ಮಾಡಿದ್ದಾನೆ.
ಇಬ್ಬರು ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು. ಹೀಗಾಗಿ ವಿವಾಹಕ್ಕೆ ಲೀಲಾ ಅವರ ಪೋಷಕರು ಒಪ್ಪಿರಲಿಲ್ಲ. ಹೀಗಾಗಿ ಲೀಲಾ ದಿನಕರ್‌ನನ್ನು ಅವೈಡ್ ಮಾಡಿದ್ದಾಳೆ. ಹೀಗಾಗಿ ದಿನಕರ್ ಲೀಲಾ ಕೆಲಸ ಮುಗಿಸಿ ಬರುವುದನ್ನೇ ಕಾಯುತ್ತಿದ್ದ. ಮಾತನಾಡಿಸುವ ನೆಪದಲ್ಲಿ ಆಕೆಯ ಬಳಿ ಹೋಗಿ, ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ನಂತರ ಅಲ್ಲೇ ಕೂತಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.