ನಮ್ಮ ಒತ್ತಡಕ್ಕೆ ಮಣಿದು ಎಲ್‌ಪಿಜಿ ಬೆಲೆ 200 ರೂ. ಇಳಿಸಿದ್ದಾರೆ; ಡಿ.ಕೆ.ಶಿವಕುಮಾರ್
ಬೆಂಗಳೂರು; ಕೇಂದ್ರ ಸರ್ಕಾರ ಅಡುಗೆ ಅನಿಲಿ ಸಿಲಿಂಡರ್‌ವೊಂದಕ್ಕೆ ೨೦೦ ರೂಪಾಯಿ ಸಬ್ಸಿಡಿ ನೀಡಿರುವುದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿಗೆ ತೆರಳುವುದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿಯವರು ಸಿಲಿಂಡರ್ ಬೆಲೆ ಇಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ದೇಶದ ಹೆಣ್ಣು ಮಕ್ಕಳು ನಮ್ಮ ರಾಜ್ಯದ ಮಾದರಿಯನ್ನು ಗಮನಿಸುತ್ತಿದ್ದಾರೆ. 500 ರೂಪಾಯಿಗೆ ಒಂದು ಎಲ್‌ಪಿಜಿ ಸಿಲಿಂಡರ್ ಕೊಡಬೇಕು ಎಂದು ನಾವು ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿದ್ದೆವು. ಈಗ ಕೇಂದ್ರ 200 ರೂಪಾಯಿ ಇಳೀಕೆ ಮಾಡಿದೆ ಎಂದರು. ನಾವು ಗೃಹಿಣಿಯರಿಗೆ ತಿಂಗಳಿಗೆ 2 ಸಾವಿರ ಕೊಡ್ತಿದ್ದೇವೆ. ಈ ಹಣ ಪ್ರತಿ ತಿಂಗಳೂ ಗೃಹಿಣಿಯರ ಅಕೌಂಟ್‌ಗೆ ನೇರವಾಗಿ ಹೋಗಲಿದೆ ಎಂದು ಹೇಳಿದರು.