ಟೊಮ್ಯಾಟೋ ಆಯ್ತು, ಈಗ ಈರುಳ್ಳಿ ಬೆಲೆ ಗಗನಕ್ಕೆ..!
ಬೆಂಗಳೂರು; ಕಳೆದ ಮೂರು ತಿಂಗಳ ಹಿಂದೆ ಟೊಮ್ಯಾಟೋ ಬೆಲೆ ಗಗನಕ್ಕೇರಿತ್ತು. ಒಂದು ಕೆಜಿ ಟೊಮ್ಯಾಟೋ ಬೆಲೆ ೨೦೦ ರೂಪಾಯಿವರೆಗೂ ಮುಟ್ಟಿತ್ತು. ಆದ್ರೆ ಈಗ ಅದರ ಬೆಲೆ ಪಾತಾಳಕ್ಕಿಳಿದೆ. ರೈತರು ಟೊಮ್ಯಾಟೋವನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಆದ್ರೆ ಇದೇ ವೇಳೆ ಈರುಳ್ಳಿ ಬೆಲೆ ಏರುತ್ತಾ ಹೋಗುತ್ತಿದೆ.
ಎರಡು ತಿಂಗಳ ಹಿಂದೆ ಈರುಳ್ಳಿ ಕೆಜಿಗೆ ಹದಿನೈದು, ಇಪ್ಪತ್ತು ರೂಪಾಯಿ ಇತ್ತು. ನೂರು ರೂಪಾಯಿ ಕೊಟ್ಟರೆ ಏಳು ಕೆಜಿ ಈರುಳ್ಳಿ ಬರುತ್ತಿತ್ತು. ಆದ್ರೆ ಇದೀಗ ಒಂದು ಕೆಜಿ ಈರುಳ್ಳಿ ಅರವತ್ತರಿಂದ ಎಪ್ಪತ್ತು ರೂಪಾಯಿ ಆಗಿದೆ. ಕಳಪೆ ಗುಣಮಟ್ಟದ ಈರುಳ್ಳಿಯೇ ಕೆಜಿಗೆ 50 ರೂಪಾಯಿ ಇದೆ.
ಡಿಸೆಂಬರ್‌ನಲ್ಲಿ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಲಿದ್ದು, ಅಲ್ಲಿಯತನಕ ಈರುಳ್ಳಿ ಬೆಲೆ ಇನ್ನೂ ಏರುವ ಸಾಧ್ಯ ಇದೆ ಎಂದು ಹೇಳಲಾಗುತ್ತಿದೆ.