BengaluruEconomy

ವಾಣಿಜ್ಯ ಬಳಕೆ ಎಲ್‌ಪಿಜಿ ದರ 100 ರೂ. ಇಳಿಕೆ; ವಾಣಿಜ್ಯ ಬಳಕೆದಾರರಿಗೆ ಹೊರೆ ಇಳಿಕೆ

ನವದೆಹಲಿ; ಇಂದು ಹಲವು ಬೆಲೆಗಳು ಏರಿಕೆಯಾಗಿವೆ. ಅದರಲ್ಲೂ ಜನಸಾಮಾನ್ಯರೆಲ್ಲಾ ಬಳಸುವ ನಂದಿನಿ ಹಾಲಿನ ದರ ಲೀಟರ್‌ಗೆ ಮೂರು ರೂಪಾಯಿ ಜಾಸ್ತಿಯಾಗಿದೆ. ಈ ನಡುವೆ ವಾಣಿಜ್ಯ ಬಳಕೆ ಎಲ್‌ಪಿಜಿ ದರ ಕಡಿಮೆ ಮಾಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 99.75 ರೂಪಾಯಿ ಕಡಿಮೆ ಮಾಡಲಾಗಿದೆ.

ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 1780 ರೂಪಾಯಿ ಇತ್ತು. ಇದೀಗ ಅದು 1680 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ 1853 ರೂಪಾಯಿ ಆಗಿದ್ದರೆ, ಕೋಲ್ಕತ್ತಾದಲ್ಲಿ 1821, ಚೆನ್ನೈನಲ್ಲಿ 1852 ರೂಪಾಯಿ ಆಗಿದೆ. ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯನ್ನು ಈಗಾಗಲೇ ಹಲವು ಬಾರಿ ಇಳಿಸಲಾಗಿದೆ. ಆದ್ರೆ ಗೃಹ ಬಳಕೆ ಸಿಲಿಂಡರ್‌ ಬೆಲೆ ಮಾತ್ರ ಹಾಗೆಯೇ ಇದೆ.

Share Post