BengaluruPolitics

ಅನುದಾನ ಹಿಂಪಡೆದಿರುವುದು ದ್ವೇಷದ ರಾಜಕಾರಣ; ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು; ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದ್ದ ಅನುದಾನವನ್ನು ವಾಪಸ್‌ ಪಡೆಯಲಾಗಿದೆ. ಇದನ್ನು ನೋಡ್ತಿದ್ರೆ ಮೇಲ್ನೋಟಕ್ಕೆ ಇದು ದ್ವೇಷದ ರಾಜಕಾರಣದಂತೆ ಕಾಣುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಅನುದಾನದ ವಿಷಯದಲ್ಲಿ ತಾರತಮ್ಯ ತೋರಬಾರದು ಎಂದು ಹೇಳಿದ್ದಾರೆ.

ಎಲ್ಲಾ ಕ್ಷೇತ್ರಗಳಂತೆ ರಾಜರಾಜೇಶ್ವರಿ ಕ್ಷೇತ್ರಕ್ಕೂ ಅನುದಾನ ನೀಡಬೇಕು. ಆದ್ರೆ ಕೊಟ್ಟಿದ್ದ ಅನುದಾನವನ್ನು ಹಿಂಪಡೆಯಲಾಗಿದೆ. ಇದು ರಾಜಕೀಯ ದ್ವೇಷದಿಂದ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಮಾತನಾಡುತ್ತೇನೆ. ಅನುದಾನ ರಿಲೀಸ್‌ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

 

Share Post