ಚೆಂದದ ಹುಡುಗಿ ಫೋಟೋ ತೋರಿಸ್ತಾರೆ; ಬಲೆಗೆ ಬೀಳಿಸಿ ಸುಲಿಗೆ ಮಾಡ್ತಾರೆ
ಬೆಂಗಳೂರು; ಬೆಂಗಳೂರಲ್ಲಿ ವೇಶ್ಯಾವಾಟಿಕೆ ಹೆಸ್ರಲ್ಲಿ ಜನರನ್ನು ಸುಲಿಯೋ ದಂಧೆ ಜೋರಾಗಿ ನಡೆಯುತ್ತಿದೆ. ಚೆಂದದ ಹುಡುಗಿ ಫೊಟೋಗಳನ್ನು ತೋರಿಸಿ, ವೇಶ್ಯಾವಾಟಿಕೆ ಹೆಸ್ರಲ್ಲಿ ಹಣ ವಸೂಲಿ ಮಾಡೋ ದಂಧೆ ನಡೆಯುತ್ತಿದೆ. ಈ ಸಂಬಂಧ ಐದು ಜೋಡಿಗಳು ಇದೀಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಟೆಲಿಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಕೋಟ್ಯಾಧೀಶ್ವರರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಗಂಟೆಗಳ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬ್ಯುಸಿನೆಸ್‌ನಲ್ಲಿ ತುಂಬಾ ಲಾಸ್ ಆಗಿದೆ. ಹೀಗಾಗಿ ಹಣ ಕೊಟ್ಟರೆ ಪತ್ನಿಯ ಜೊತೆ ಸೆಕ್ಸ್ ಗೆ ಅವಕಾಶ ಮಾಡಿಕೊಡ್ತೀನಿ ಎಂದು ಕೋಟ್ಯಾಧೀಶ್ವರರಿಗೆ ಸುಂದರ ಫೋಟೋಗಳನ್ನು ಕಳುಹಿಸುತ್ತಿದ್ದರು. ಅನಂತರ ಗಂಡ-ಹೆಂಡತಿ ತರಾನೇ ಪ್ರತಿ ವೀಕೆಂಡ್ ನಗರಕ್ಕೆ ಎಂಟ್ರಿ ಕೊಡುತ್ತಿದ್ದರು.
ಉತ್ತರ ಭಾರತದಿಂದ ಪ್ರತಿ ವೀಕೆಂಡ್ 50 ರಿಂದ 60 ಜೋಟಿ ಬೆಂಗಳೂರಿಗೆ ಬರುತ್ತಿತ್ತು ಎನ್ನಲಾಗಿದೆ. ಪತ್ನಿಯದ್ದೆಂದು ವೇಶ್ಯೆಯರ ಫೋಟೋಗಳನ್ನು ಕಳುಹಿಸುತ್ತಿದ್ದ ಆರೋಪಿಗಳು, ಒಮ್ಮೆ ಮಾತ್ರ ಪತ್ನಿ ಜೊತೆ ಸೆಕ್ಸ್‌ಗೆ ಅವಕಾಶ ಮಾಡಿಕೊಡ್ತೀವಿ ಎಂದು ಹೇಳುತ್ತಿದ್ದರು. ಐಶಾರಾಮಿ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ, ಅಡ್ವಾನ್ಸ್ ಹಣ ಪಡೆದು ನಗರಕ್ಕೆ ಬರುತ್ತಿದ್ದರು. ಒಂದು ಗಂಟೆಗೆ 40 ರಿಂದ 50 ಸಾವಿರ ರೂಪಾಯಿ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಐದು ಜೋಡಿಗಳನ್ನು ಬಂಧಿಸಿದ್ದಾರೆ.