ಜಿಮ್ಗೆ ಹೋದಾತ ವಾಪಸ್ ಬರಲಿಲ್ಲ; ಮತ್ತೊಂದು ಮನೆಯಲ್ಲಿ ಹೆಣವಾಗಿದ್ದ
ಬೆಂಗಳೂರು; ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಜಿಮ್ ಹೋಗಿದ್ದ ವ್ಯಕ್ತಿ ಮನೆಯೊಂದರಲ್ಲಿ ಭೀಕರವಾಗಿ ಹತ್ಯೆಯಾಗಿದ್ದಾನೆ. ಬೆಂಗಳೂರಿನ ನಾಯಂಡಹಳ್ಳಿಯ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿ ಮನೆಯಲ್ಲಿ ಈ ಕೃತ್ಯ ಎಸಗಲಾಗಿದೆ.
ನಲವತ್ತನಾಲ್ಕು ವರ್ಷದ ಲಿಯಾಖತ್ ಅಲಿಖಾನ್ ಎಂಬಾತನೇ ಕೊಲೆಯಾದ ವ್ಯಕ್ತಿ. ರಾತ್ರಿ ಜಿಮ್ಗೆ ಹೋಗುತ್ತೇನೆಂದು ಮನೆಯಿಂದ ಹೊರಗೆ ಹೋಗಿದ್ದರು. ಆದ್ರೆ, ಎಷ್ಟು ಹೊತ್ತಾದರೂ ವಾಪಸ್ ಬಂದಿರಲಿಲ್ಲ. ಕುಟುಂಬದವರು ಅನುಮಾನದಿಂದ ಹುಡುಕಾಟ ನಡೆಸಿದ್ದಾರೆ. ಆದ್ರೆ ಬೆಳಗಿನ ಜಾವ ಆತ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲಿಯಾಖತ್ ಅಲಿಖಾನ್ ನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಹಣಕಾಸಿನ ವಿಚಾರದಲ್ಲಿ ಈ ಕೊಲೆ ನಡೆದಿರಬಹುದು ಅಂತ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಯಾದವನ ಸ್ನೇಹಿತರಾದ ವಾಸಿಂ ಹಾಗೂ ಜೋಹರ್ ಎಂಬುವವರೇ ಕೊಲೆ ಮಾಡಿರಬಹುದು ಎಂದು ದೂರಲಾಗಿದೆ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.