ರೈತರ ಪರವಾಗಿ ಜನತಾ ರೈತ ಸಂಘ ಧ್ವನಿ ಎತ್ತಲಿದೆ; ಈರೇಗೌಡ
ಬೆಂಗಳೂರು; ಆಲಿಕಲ್ಲು ಮಳೆಯಿಂದ ತೊಂದರೆ ಗೀಡಾದ ರೈತರ ಪರವಾಗಿ ಸರ್ಕಾರ ಎಚ್ಚೆತ್ತಕೊಳ್ಳದಿದ್ದರೆ ಮುಂದಿನ ದಿನಗಳ ಪ್ರತಿ ಜಿಲ್ಲೆಗಳಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಜನತಾ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಈರೇಗೌಡ ಹೇಳಿದರು. ಕೆಆರ್ ಪುರದಲ್ಲಿ ನಡೆದ ಜನತಾ ರೈತ ಸಂಘದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು, ಕೋಲಾರದ ಶ್ರೀನಿವಾಸಪುರ ತಾಲೂಕಿನ ಬಿಸನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಿಂದ ಸಾವಿರಾರು ರೈತರು ಬೀದಿಗೆ ಬಿದ್ದಿದ್ದಾರೆ..
ಸರ್ಕಾರ ಕೂಡಲೇ ಎಚ್ಚೆತ್ತು ಇವರಿಗೆ ಪರಿಹಾರ ನೀಡಬೇಕು. ಚಿಕ್ಕಮಗಳೂರು, ಚಿಕ್ಕಬಳ್ಳಾಪುರದಲ್ಲಿ ಅಕಾಲಿಕೆ ಮಳೆಯಿಂದ ತೊಂದರೆ ಗೀಡಾಗಿರುವ ರೈತರಿಗೆ ಪರಿಹಾರ ಘೋಷಿಸಬೇಕು, ಸರ್ಕಾರ ಎಚ್ಚೆತ್ತುಕೊಳ್ಳದಿದ್ರೆ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಮೌನ ಪ್ರತಿಭಟನೆ ನಡೆಸಿ ಹೋರಾಟ ಮಾಡಲಿದ್ದೇವೆ ಎಂದರು..
ಉಪಾಧ್ಯಕ್ಷರು ಹಾಗು ಖಜಾಂಚಿ ಶ್ರೀನಿವಾಸ್ ಸುಬ್ಬು ಮಾತನಾಡಿ, ನಮ್ಮ ಜನತಾ ರೈತ ಸಂಘಟನೆಗೆ ನೂತನವಾಗಿ ನೇಮಕವಾಗಿರುವ ಪದಾಧಿಕಾರಿಗಳಿಗೆ ಇಂದು ನೇಮಕಾತಿ ಪತ್ರ ವಿತರಿಸಲಿದ್ದೇವೆ. ಸರ್ಕಾರ ನೊಂದ ರೈತರ ಪರವಾಗಿ ನಿಲ್ಲಬೇಕು.. ಅಕಾಲಿಕೆ ಮಳೆಯಿಂದ ತತ್ತರಿಸುವ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ದ ಹೋರಾಟ ಮಾಡಲಾಗುವುದು ಎಂದರು. ಈ ವೇಳೆ ಯುವ ಘಟಕದ ಅಧ್ಯಕ್ಷರಾದ ಸತೀಶ್ ಗೌಡ, ಕಾರ್ಯಾಧ್ಯಕ್ಷ ರಘು ಕೆಎನ್, ಶಿವಪ್ರಕಾಶ್ ಹೀರೇಮಠ್, ಕೃಪಾಕರ ರೆಡ್ಡಿ, ಮಹೇಶ್ ಸಿಂಹ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.
ಪೂರ್ವಾಭಾವಿ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಮಹಿಳಾ ಘಟಕದ ಅಧ್ಯಕ್ಷರಾದ ರಾಧಾ ಚಂದ್ರಶೇಖರ್, ಉಪಾಧ್ಯಕ್ಷರಾದ ಜಯಂತಿ, ಉಷಾ.ವಿ, ಪ್ರೇಮ, ಸುಮಿತ್ರ,ನೇತ್ರ,ಸುನಿತ, ಶಿವಶಂಕರಗೌಡ ಹಾಗೂ ಮೋಹನ್ ಎಂಕೆ ಹಾಗು ಇನ್ನಿತರರಿಗೆ ಐಡಿಕಾರ್ಡ್ ಹಾಗು ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.