ಇಶಾ ಫೌಂಡೇಶನ್ಗೆ ಸಿಹಿ ಸುದ್ದಿ; ಆದಿಯೋಗಿ ಮೂರ್ತಿ ಅನಾವರಣಕ್ಕೆ ಅವಕಾಶ
ಬೆಂಗಳೂರು; ಇಶಾ ಫೌಂಡೇಶನ್ ಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ಮೊನ್ನೆ ಕೋರ್ಟ್ ಚಿಕ್ಕಬಳ್ಳಾಪುರದ ಬಳಿ ನಿರ್ಮಿಸಲಾಗಿರುವ ಆದಿಯೋಗಿ ಮೂರ್ತಿ ಅನಾವರಣಕ್ಕೆ ತಡೆ ನೀಡಿತ್ತು. ಇದೀಗ ಕೋರ್ಟ್, ಮೂರ್ತಿ ಅನಾವರಣಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಜನವರಿ 15 ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉಪರಾಷ್ಟ್ರಪತಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇಶಾ ಫೌಂಡೇಶನ್ ತನ್ನ ನಿಗದಿತ ಕಾರ್ಯವನ್ನು 15 ಜನವರಿ 2023 ರಂದು ಪೂರ್ವಯೋಜಿತ ರೀತಿಯಲ್ಲಿ ಮುಂದುವರಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ನೇತೃತ್ವದ ಪೀಠ, ಆದಿಯೋಗಿ ಮೂರ್ತಿಯ ಕಾಮಗಾರಿ ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಆದೇಶಿಸಿದೆ.