BengaluruNationalPolitics

ರಾಜ್ಯದಲ್ಲಿ ವಿದ್ಯುತ್‌ ಅಭಾವಕ್ಕೆ ಬಿಜೆಪಿಯೇ ಕಾರಣ; ಕೆ.ಜೆ.ಜಾರ್ಜ್‌ ಆರೋಪ

ನವದೆಹಲಿ; ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಲೋಡ್‌ಶೆಡ್ಡಿಂಗ್‌ ನಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ನಡುವೆ ದೆಹಲಿಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಈ ಮಟ್ಟದ ವಿದ್ಯುತ್‌ ಅಭಾವ ಆಗೋದಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪ ಮಾಡಿದ್ದಾರೆ.

ನಾವು ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ನಾಲ್ಕು ವರ್ಷ ಅಧಿಕಾರ ನಡೆಸಿತ್ತು. ಈ ಅವಧಿಯಲ್ಲಿ ವಿದ್ಯುತ್‌ ಸಂಗ್ರಹಕ್ಕೆ ಪ್ರಯತ್ನ ಮಾಡಿರಲಿಲ್ಲ. ಅಂದು ಅವರು ವಿದ್ಯುತ್‌ ಸಂಗ್ರಹ ಮಾಡದೇ ಇದ್ದುದರ ಪರಿಣಾಮವೇ ಈಗ ವಿದ್ಯುತ್‌ ಕೊರತೆಯಾಗೋದಕ್ಕೆ ಕಾರಣ ಎಂದು ಜಾರ್ಜ್ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ ಗಾಳಿಯೂ ಸರಿಯಾದ ಬೀಸದ ಕಾರಣ ವಿಂಡ್‌ ಎನರ್ಜಿ ಕೂಡಾ ಉತ್ಪಾದನೆಯಾಗುತ್ತಿಲ್ಲ. ರಾಜ್ಯಕ್ಕೆ 16000 ಮೆಗಾ ವ್ಯಾಟ್‍ ವಿದ್ಯುತ್‌ ಬೇಡಿಕೆ ಇದ್ದು,  ಸದ್ಯ ರಾಜ್ಯದಲ್ಲಿ 1500 ಮೆಗಾ ವ್ಯಾಟ್ ಕೊರತೆಯಾಗಿದೆ ಎಂದು ಜಾರ್ಜ್‌ ವಿವರಿಸಿದ್ದಾರೆ.

 

Share Post