BengaluruCrime

26 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶ

ದೇವನಹಳ್ಳಿ; ಭಾರಿ ಪ್ರಮಾಣದ ಕೊಕೇನ್ ಅನ್ನು ಕೆಂಪೇಗೌಡ ವಿಮಾನ‌‌ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಸುಮಾರು 2.6ಕೆಜಿ ತೂಕದ ಕೊಕೇನ್ ಇದಾಗಿದ್ದು ಇದರ ಬೆಲೆ ಬರೋಬ್ಬರಿ 26 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

 

ಕೊಕೇನ್ ಸಮೇತ ವಿದೇಶಿ‌ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಡಿಅರ್ ಎ ಕಚೇರಿಯಲ್ಲಿ‌ ಮಹಿಳೆಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

 

ಪ್ರವಾಸಿ ವೀಸಾ ಮೆರೆಗೆ ದೇಶಕ್ಕೆ ಬಂದಿದ್ದ ಕೀನ್ಯಾ ಮೂಲದ 36 ವರ್ಷದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಲಗೇಜ್ ಬ್ಯಾಗ್​ನಲ್ಲಿ ಕೊಕೇನ್ ಮರೆಮಾಚಿ ಬೆಂಗಳೂರಿನಿಂದ ದೆಹಲಿಗೆ ಸಾಗಿಸಲು ಯತ್ನಿಸುತ್ತಿದ್ದಳು. ಈ ವೇಳೆ ಸಿಕ್ಕಿಬಿದ್ದಿದ್ದಾಳೆ.

Share Post