ಬೆಂಗಳೂರಿಗೆ ಸ್ವಿಟ್ಜರ್ಲೆಂಡ್ ನಿಯೋಗ ಭೇಟಿ; ಸಿಎಂ ಜೊತೆ ಮಾತುಕತೆ
ಬೆಂಗಳೂರು: ಸ್ವಿಟ್ಜರ್ಲೆಂಡ್ ದೇಶದ ರಾಯಭಾರಿ ಡಾ.ರಾಲ್ಫ್ ಹೆಕ್ನರ್ ಇಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ಅವರೊಂದಿಗೆ ಸ್ವಿಟ್ಜರ್ಲೆಂಟ್ ನಿಯೋಗ ಕೂಡಾ ಭೇಟಿ ನೀಡಿತ್ತು. ಈ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೈಗಾರಿಕಾ ಇಲಾಖೆ ಎ.ಸಿ.ಎಸ್. ರಮಣರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.