BengaluruCrime

ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಅರೆಸ್ಟ್‌; ಪೊಲೀಸರಿಂದ ವಿಚಾರಣೆ

ಬೆಂಗಳೂರು; ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕಾಶ್ಮೀರದ ಉಗ್ರನೊಬ್ಬನನ್ನು ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಶಂಕಿತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ತಿಲಕ್ ನಗರದಲ್ಲಿ ನೆಲೆಸಿದ್ದ ಶಂಕಿತ ಉಗ್ರ ಅಖ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆತನ ಬಗ್ಗೆ ಮಾಹತಿ ಕಲೆ ಹಾಕುತ್ತಿದ್ದಾರೆ.

ಅಸ್ಸಾಂ ಮೂಲದ ಅಖ್ತರ್‌ ಹುಸೇನ್ ತಿಲಕ್ ನಗರದ ಬಹುಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ವಾಸವಿದ್ದ. ಆತನ ಜೊತೆ ಆಹಾರ ಡೆಲಿವರಿ ಬಾಯ್‌ಗಳು ವಾಸವಿದ್ದರು. ಶಂಕಿತನ ಬಗ್ಗೆ ಕೇಂದ್ರ ಗುಪ್ತದಳದಿಂದ‌ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿದ ಸಿಸಿಬಿ‌ ಪೊಲೀಸರು, ರಾತ್ರಿ‌ ಮನೆ ಮೇಲೆ ದಾಳಿ‌ ಮಾಡಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಉತ್ತರ ಭಾರತದಿಂದ ತಲೆಮರೆಸಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದ ಎಂದು ತಿಳಿದುಬಂದಿದೆ.

Share Post