Bengaluru

BMTC ಬಸ್‌ನಲ್ಲಿ ಸಂಚರಿಸಿದ ಶಾಸಕ ಸುರೇಶ್‌ ಕುಮಾರ್‌

ಬೆಂಗಳೂರು : ಶಾಸಕ ಸುರೇಶ್‌ ಕುಮಾರ್‌ ಇಂದು ಮುಂಜಾನೆ ಬಿಎಂಟಿಸಿ ಬಸ್ ಮೂಲಕ ಸಂಚರಿಸಿದ್ದಾರೆ. ಸುರೇಶ್‌ ಕುಮಾರ್‌ ಅವರ ಈ ಸರಳ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸುರೇಶ್‌ ಕುಮಾರ್‌ ಅವರು ಬಸವೇಶ್ವರ ನಗರದ ತಮ್ಮ ನಿವಾಸದಿಂದ ನಡೆದು ಹೋಗಿ ಸುಮ್ಮನಹಳ್ಳಿಯಲ್ಲಿ ಸ್ನೇಹಿತನೊಂದಿಗೆ ಬಸ್‌ ಹತ್ತಿದ್ದಾರೆ. ಮ್ಮೊಬ್ಬ ಸ್ನೇಹಿತರೊಂದಿಗೆ ಬಿಎಂಟಿಸಿ ಬಸ್ ಹತ್ತಿದ ಸುರೇಶ್ ಕುಮಾರ್ ತಾವರೆಕೆರೆಯವರೆಗೂ ಬಸ್‍ನಲ್ಲಿ ಸಂಚರಿಸಿದ್ದಾರೆ.

ಕಂಡಕ್ಟರ್‌ ನಿರಾಕರಿಸಿದರೂ ಟಿಕೇಟ್‌ ತೆಗೆದುಕೊಂಡೇ ಪ್ರಯಾಣ ಬೆಳೆಸಿದ ಸುರೇಶ್‌ ಕುಮಾರ್‌ ಅನ್ಯರಿಗೆ ಮಾದರಿಯಾಗಿದ್ದಾರೆ.

Share Post