Bengaluru

ಮುದ್ದು ನಾಯಿಯ ಬರ್ತ್‌ಡೇ ಆಚರಿಸಿದ ಸುಧಾಮೂರ್ತಿ

ಬೆಂಗಳೂರು: ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿಯವರು ತಮ್ಮ ಮುದ್ದಿನ ನಾಯಿ ಗೋಪಿಗೆ ಬರ್ತ್‌ ಡೇ ಆಚರಿಸಿದ್ದಾರೆ. ಸಾಕು ನಾಯಿ ಗೋಪಿ ಮುಂದೆ ಹಾಡು ಹೇಳುವ ಮೂಲಕ ಸುಧಾಮೂರ್ತಿಯವರು ಗೋಪಿಗೆ ಶುಭ ಕೋರಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಸುಧಾಮೂರ್ತಿಯವರಿಗೆ ಸಾಕು ನಾಯಿ ಗೋಪಿ ಎಂದರೆ ಪ್ರಾಣ. ಅದರ ಪ್ರತಿಯೊಂದು ಚಲನವಲನಗಳನ್ನೂ ಸುಧಾಮೂರ್ತಿ ಗಮನಿಸುತ್ತಾರೆ. ಅದರೊಂದಿಗೆ ಆಟವಾಡುತ್ತಾರೆ. ಇಷ್ಟೇ ಅಲ್ಲ, ತಮ್ಮ ಮುದ್ದಿನ ನಾಯಿ ಗೋಪಿ ಬಗ್ಗೆ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಅದೇ ಗೋಪಿ ಡೈರೀಸ್.‌ ಎರಡು ವರ್ಷದ ಹಿಂದೆಯೇ ಈ ಪುಸ್ತಕ ಬಿಡುಗಡೆಯಾಗಿದೆ. ಹಾರ್ಪರ್‌ ಕಾಲಿನ್ಸ್‌ ಇಂಡಿಯಾ ಎಂಬ ಪ್ರಕಾಶನ ಸಂಸ್ಥೆ ಈ ಪುಸ್ತಕ ಪ್ರಕಟಿಸಿದ್ದು, ಗೋಪಿ ಡೈರೀಸ್‌ ಹೆಸರಿನಲ್ಲಿ ಇನ್ನೂ ಎರಡು ಪುಸ್ತಕಗಳು ಬರಲಿವೆಯಂತೆ.

ಸಾಕು ನಾಯಿ ಗೋಪಿ ದೃಷ್ಟಿಕೋನದಲ್ಲಿ ಸುಧಾಮೂರ್ತಿ ಜಗತ್ತು ನೋಡಿದ್ದಾರೆ. ನಾಯಿ ದೃಷ್ಟಿಕೋನದಲ್ಲಿ ಜಗತ್ತು ಹೇಗಿರುತ್ತದೆ ಎಂಬುದನ್ನು ಪುಸ್ತಕದಲ್ಲಿ ಬರೆದಿದ್ದಾರೆ. ಸಣ್ಣ ಸಣ್ಣ ಕಥೆಗಳ ರೂಪದಲ್ಲಿ ಗೋಪಿ ಡೈರೀಸ್‌ ಪ್ರಕಟಿಸಲಾಗಿದೆ. ಗೋಪಿ ಸುಧಾಮೂರ್ತಿಯವರ ಮನೆಗೆ ಬರುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಗೋಪಿ ಮನೆಯ ವಾತಾವರಣಕ್ಕೆ ಹೊಂದಿಕೊಂಡಿದ್ದು ಹೇಗೆ..? ಕುಟುಂಬ ಸದಸ್ಯರ ಜೊತೆ ಪ್ರೀತಿ ಬೆಳೆಸಿಕೊಂಡಿದ್ದು ಹೇಗೆ..?  ಜೊತೆಗೆ ಅದು ಜಗತ್ತನ್ನು ನೋಡುವ ರೀತಿ ಹೇಗಿರುತ್ತೆ..? , ಜನರ ಬಗ್ಗೆ ಅದು ಯೋಚಿಸುವ ಬಗೆ ಹೀಗೆ ಗೋಪಿಯ ದೃಷ್ಟಿಕೋನದಲ್ಲಿ ಪ್ರಪಂಚವನ್ನು ನೋಡುವ ಬಗೆಯನ್ನು ಕತೆಯ ರೂಪದಲ್ಲಿ ಸುಧಾಮೂರ್ತಿ ನೀಡಲಾಗಿದೆ.

Share Post