Sonia Gandhi; 4 ವರ್ಷದ ನಂತರ ಪ್ರಚಾರಕ್ಕೆ ಬರ್ತಿದ್ದಾರೆ ಸೋನಿಯಾ
ಹುಬ್ಬಳ್ಳಿ; ಎಐಸಿಸಿ ಮಾಜಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡಾ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಅವರು ಹುಬ್ಬಳ್ಳಿಯಲ್ಲಿ ನಡೆಸುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಸೋನಿಯಾಗಾಂಧಿಯವರು ಪ್ರಚಾರ ಭಾಷಣ ನಡೆಸಲಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸೋತರು. ಇದಾದ ಮೇಲೆ ಅವರಿಗೆ ಅನಾರೋಗ್ಯವೂ ತೀವ್ರವಾಗಿ ಕಾಡುತ್ತಿತ್ತು. ರಾಜಕೀಯದಲ್ಲಿ ಸಕ್ರಿಯವಾಗಿದ್ದೂ ಎಲ್ಲಿಯೂ ಪ್ರಚಾರಕ್ಕೆ ಹೋಗಿರಲಿಲ್ಲ. ಗುಜರಾತ್, ಉತ್ತರ ಪ್ರದೇಶ ಚುನಾವಣೆಗಳಲ್ಲೂ ಪ್ರಚಾರ ಮಾಡಿರಲಿಲ್ಲ. ಆದ್ರೆ ನಾಲ್ಕು ವರ್ಷದ ನಂತರ ಸೋನಿಯಾ ಗಾಂಧಿಯವರು ಇದೇ ಮೊದಲ ಬಾರಿಗೆ ಕರ್ನಾಟದಲ್ಲಿ ಪ್ರಚಾರ ನಡೆಸಲಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಸೋನಿಯಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಆಗಾಗ ಅವರಿಗೆ ಅನಾರೋಗ್ಯ ಕೂಡಾ ಕಾಡುತ್ತಿತ್ತು. ಇನ್ನು ಕಳೆದ ವರ್ಷ ಅಂದ್ರೆ 2022ರ ಅಕ್ಟೋಬರ್ 6ರಂದು ಸೋನಿಯಾಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದರು. ಅದೇ ವೇಳೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದರು. ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಸೇರಿದ ಸೋನಿಯಾ ಸ್ವಲ್ಪ ದೂರ ಹೆಜ್ಜೆ ಹಾಕಿದ್ದಾರು. ಅನಂತರ ಸೋನಿಯಾಗಾಂಧಿ ಕೊಡಗಿನಲ್ಲಿ ಒಂದೆರಡು ವಿಶ್ರಾಂತಿ ಮಾಡಿದ್ದರು.
ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರೋದಕ್ಕೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇದುವರೆಗೂ 43 ರ್ಯಾಲಿಗಳನ್ನು ನಡೆಸಿದ್ದಾರೆ. 13 ರೋಡ್ ಶೋಗಳನ್ನು ಮಾಡಿದ್ದಾರೆ. ಸತತವಾಗಿ ಅವರು ರಾಜ್ಯದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.
ಇದೀಗ ಸೋನಿಯಾ ಗಾಂಧಿ ಕೂಡಾ ಕಾಂಗ್ರೆಸ್‌ಗೆ ಸಾಥ್ ನೀಡಲು ಬರುತ್ತಿದ್ಧಾರೆ. ಅನಾರೋಗ್ಯದ ನಡುವೆಯೂ ಸೋನಿಯಾ ರಾಜ್ಯದಲ್ಲಿ ಪ್ರಚಾರಕ್ಕೆ ಬರುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದಾರೆ.