BengaluruPolitics

ವೈಯಕ್ತಿಕ ಹಿತಾಸಕ್ತಿಗಾಗಿ ಕೆಲವರು ಬಿಜೆಪಿ ಹಾಳು ಮಾಡ್ತಿದ್ದಾರೆ; ಜಗದೀಶ್‌ ಶೆಟ್ಟರ್‌

ಬೆಂಗಳೂರು; ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಕೇಂದ್ರದ ನಾಯಕರಿಗೆ ಗೊತ್ತಿಲ್ಲ. ಇಲ್ಲಿನ ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷ ಹಾಳು ಮಾಡುತ್ತಿದ್ದಾರೆ. ಲಿಂಗಾಯತ ನಾಯಕರಲ್ಲಿ ಯಡಿಯೂರಪ್ಪ ಮೊದಲಿಗರು. ಬಿಟ್ಟರೆ ನಾನೇ. ಈ ಕಾರಣಕ್ಕಾಗಿಯೇ ನನ್ನನ್ನು ಬಿಜೆಪಿಯಿಂದ ಹೊರಹಾಕಿದರು ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದ ಶೆಟ್ಟರ್‌, ಈ ರೀತಿ ಹೇಳಿದರು.

ಕಳೆದ 35 ವರ್ಷದಿಂದ ನಾನು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನನಗೆ ಎಲ್ಲಾ ಗೌರವ, ಸ್ಥಾನಮಾನಗಳು ಕೂಡಾ ಅಲ್ಲಿ ಸಿಕ್ಕಿವೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಕಟ್ಟಿ ಬೆಳೆಸೋ ಕೆಲಸ ಮಾಡಿದೀನಿ. ಆರು ಬಾರಿ ಗೆದ್ದ ನನಗೇ ಟಿಕೆಟ್‌ ಇಲ್ಲ ಎಂದಾಗ ಆಘಾತವಾಯಿತು ಎಂದು ಶೆಟ್ಟರ್‌ ಇದೇ ವೇಳೆ ಹೇಳಿದರು.

 

Share Post