ಟ್ಯಾಕ್ಸ್ ಅನ್ನು ಶ್ರೀಮಂತರ ಮೇಲೆ ಹಾಕಿ ಬಡವರ ಮೇಲಲ್ಲ-ಸಿದ್ದರಾಮಯ್ಯ ಕಿಡಿ
ಬೆಂಗಳೂರು: ವಿಧಾನಸೌಧದಲ್ಲಿ ಬಜೆಟ್ ಮೇಲಿನ ಅಧಿವೇಶನ ನಡೆಯುತ್ತಿದೆ. ಈ ವೇಳೆ ಆಡಳಿತ ಪಕ್ಷದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಕೇಂದ್ರ ಸರ್ಕಾರದಿಂದ ಬರುವ ನಮ್ಮ ಪಾಲು ದಿನೇ ದಿನೇ ಕಡಿಮೆಯಾಗುತ್ತಿದೆ. ಇರುವ ಟ್ಯಾಕ್ಸ್ ಎಲ್ಲವನ್ನು ಬಡವರ ಮೇಲೆ ಹಾಕಿದ್ರೆ ಹೇಗೆ..? ಈ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಆದ ಅನ್ಯಾಯ ಇನ್ಯಾವ ರಾಜ್ಯಕ್ಕೂ ಆಗಿಲ್ಲ. 5,495 ಕೋಟಿ ಕೊಡ್ತೀವಿ ಅಂತ ಇಂಟ್ರೀಮ್ ರಿಪೋರ್ಟ್‌ನಲ್ಲಿತ್ತು. ಅದು ಫೈನಲ್ ರಿಪೋರ್ಟ್ ಬಂದಾಗ ಆ ಬಗ್ಗೆ ಯಾವುದೇ ಸೂಚನೆ ಇಲ್ಲ. ಸೀತಾರಾಮನ್ ಕೊಡಲ್ಲ ಅಂದ್ರು ನಮ್ಮ 25ಜನ ಎಂಪಿಗಳು ಸುಮ್ಮನಾದ್ರು ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ರು.
ನಮಗೆ ಕೇಂದ್ರ ಸರ್ಕಾರದಿಂದ ಬರುವ ತೆರಿಗೆಯ ಪಾಲು ಎಷ್ಟು ಕಡಿಮೆ ಆಗಿದೆ ಗೊತ್ತಾ. 14 ರಿಂದ15 ಕಮೀಷನ್‌ನಲ್ಲಿ 1.07 ಪರ್ಸೆಂಟ್ ಕಡಿಮೆಯಾಗಿದೆ. ಕೇಂದ್ರ ಸರ್ಕಾರದವರು ಸಾಲ ಮಾಡುವುದಕ್ಕೆ ಶುರು ಮಾಡಿದ್ದಾರೆ. 2013/14ರಲ್ಲಿ 53ಲಕ್ಷದ 11 ಸಾವಿರ ಕೋಟಿ ಸಾಲ ಇತ್ತು. ಆದರೀಗ 152 ಲಕ್ಷದ 17 ಸಾವಿರದ 910 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದೆ. ಕೇಂದ್ರ ನಮಗೆ ನೀಡುವ ಪಾಲನ್ನು ಸರಿಯಾಗಿ ನೀಡಿದ್ರೆ ಎಂತಹ ರೋಗ ಬಂದರೂ ಅದನ್ನು ಪರಿಹಾರ ಮಾಡಿಕೊಳ್ಳುವ ಸ್ಥೈರ್ಯ ನಮಗೆ ಬರುತ್ತದೆ ಎಂಬ ಮಾತನ್ನು ಹೇಳಿದ್ರು. ಈ ವೇಳೆ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ ಸಭಾಪತಿಯವರು ಮುಂದೂಡಿಕೆ ಮಾಡಿದ್ರು.