100 ಅಡಿ ಆಳದ ಗುಂಡಿಗೆ ಬಿದ್ದ ಶಾಲಾ ಬಸ್
ಬೆಂಗಳೂರು; ಹೆಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ನೂರು ಅಡಿ ಆಳದ ಗುಂಡಿಗೆ ಉರುಳಿಬಿದ್ದಿದೆ. ಘಟನೆ ವೇಳೆ ಬಸ್‌ನಲ್ಲಿ ಮಕ್ಕಳಿರಲಿಲ್ಲ. ಈ ಹಿನ್ನೆಲೆಯಲ್ಲಿ ದೊಡ್ಡ ದುರಂತ ತಪ್ಪಿದೆ.
ಮಕ್ಕಳನ್ನು ಕರೆತರಲು ಹೋಗಿದ್ದಾಗ ಈ ಘಟನೆ ನಡೆದಿದ್ದು, ಬಸ್ ಚಾಲಕನಿಗೆ ಗಾಯಗಳಾಗಿವೆ. ಕೂಡ್ಲು ಬಳಿಯ ರಸ್ತೆ ಪಕ್ಕ ಇರುವ ಬಂಡೆ ಹಳ್ಳ 100 ಅಡಿಗೂ ಹೆಚ್ಚು ಆಳವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹಳ್ಳವನ್ನು ಮುಚ್ಚಿಸಲು ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರಂತೆ. ಆದರೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.