BengaluruCrime

ಶಾಲೆಗಳಿಗೆ ಬಾಂಬ್‌ ಬೆದರಿಕೆ ಪ್ರಕರಣ; ಇ-ಮೇಲ್‌ನಲ್ಲಿ ಏನಿದೆ ಗೊತ್ತಾ..?

ಬೆಂಗಳೂರು; ಬೆಂಗಳೂರಿನ 28 ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದೆ. Kharijjitas@bebble.comನಿಂದ ಮೇಲ್‌ ಬಂದಿದೆ. ಎಲ್ಲಾ ಶಾಲೆಗಳಿಗೂ ಒಂದೇ ಮೇಲ್‌ ಐಡಿಯಿಂದ ಹಾಗೂ ಒಂದೇ ರೀತಿಯ ಮೇಲ್‌ ಬಂದಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಇದನ್ನು ಪರಿಶೀಲನೆ ಮಾಡುತ್ತಿದ್ದಾರೆ. 

ಅಂದಹಾಗೆ ಇ-ಮೇಲ್‌ನಲ್ಲಿರುವ ವಿಷಯ ಏನು..?

ಶಾಲೆಯ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಅಲ್ಲಾಹ್‌ನ ದಾರಿಯಲ್ಲಿರುವ ನೂರಾರು ಮುಜಾಹಿದ್ದಿನ್‌ಗಳು ಹುತಾತ್ಮರಾಗುವ ಉದ್ದೇಶದಿಂದಲೇ ಯುದ್ಧ ಪ್ರದೇಶಕ್ಕೆ ಬಂದಿದ್ದಾರೆ. ನೀವೆಲ್ಲಾ ಅಲ್ಲಾಹ್‌ ಶತ್ರುಗಳಾಗಿದ್ದು, ನಿಮ್ಮನ್ನು ನಿಮ್ಮ ಮಕ್ಕಳನ್ನೂ ಕೊಲ್ಲುತ್ತೇವೆ. ನೀವು ನಮ್ಮ ಅಡಿಯಾಳಾಗುವುದಕ್ಕೆ ಅವಕಾಶವಿದೆ. ಇಲ್ಲದಿದ್ದರೆ ಅಲ್ಲಾಹ್‌ ನ ನಿಜವಾದ ಧರ್ಮವನ್ನು ಒಪ್ಪಿಕೊಳ್ಳಿ ಎಂದು ಇ-ಮೇಲ್‌ನಲ್ಲಿ ಬರೆಯಲಾಗಿದೆ.

ದೇವಸ್ಥಾನಗಳು ನಿಮ್ಮ ವಿಗ್ರಹಗಳು, ಬುದ್ಧನಿಂದ ಅನಂತದವರೆಗೆ ಎಲ್ಲವೂ ನಮ್ಮ ಸ್ಫೋಟದಿಂದ ಛಿದ್ರಛಿದ್ರವಾಗಲಿದೆ ಎಂದೂ ಬರೆಯಲಾಗಿದೆ.

Share Post