Districts

ಮಂತ್ರಿಗಳು ಮಂತ್ರಿ ರೀತಿ ವರ್ತನೆ ಮಾಡಲಿಲ್ಲ; ಅಶ್ವತ್ಥ್‌ ನಾರಾಯಣ್‌ ವಿರುದ್ಧ ಡಿ.ಕೆ.ಸುರೇಶ್‌ ಸಿಡಿಮಿಡಿ

ರಾಮನಗರ: ರಾಮನಗರದಲ್ಲಿ ನಡೆದ ಅಂಬೇಡ್ಕರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ನಡೆದ ಗದ್ದಲದ ಬಗ್ಗೆ ಸಂಸದ ಡಿ.ಕೆ.ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಚಾರ ಸಭೆ ರೀತಿಯಲ್ಲಿ ಸಚಿವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ್‌ ಅವರು, ಭಾಷಣ ಮಾಡುತ್ತಿರಲಿಲ್ಲ. ಬದಲಾಗಿ ವೀರಾವೇಶದಿಂದ ಮಾತನಾಡುತ್ತಿದ್ದರು. ಸಚಿವರು ಸವಾಲೆಸೆದು ಕರೆದಾಗ ಸುಮ್ಮನೆ ಕೂರಲು ಆಗುವುದಿಲ್ಲ. ಹೀಗಾಗಿ ಅವರು ಮಾತನಾಡುತ್ತಿದ್ದ ಜಾಗಕ್ಕೆ ಹೋಗಿ ಪ್ರಶ್ನೆ ಮಾಡಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಸಚಿವ ಅಶ್ವತ್ಥ್‌ ನಾರಾಯಣ್‌ ಅವರು ತೊಡೆತಟ್ಟಿ ಯುದ್ಧಕ್ಕೆ ಆಹ್ವಾನ ನೀಡುವಂತೆ ಮಾತನಾಡಿದರು. ಅದು ಸರ್ಕಾರದ ಕಾರ್ಯಕ್ರಮದ ರೀತಿಯಲ್ಲಿ ಇರಲಿಲ್ಲ. ನಮ್ಮನ್ನ ಟಾರ್ಗೆಟ್‌ ಮಾಡಿ, ಯುದ್ಧಕ್ಕೆ ಆಹ್ವಾನ ನೀಡಿದಂತಿತ್ತು. ಹೀಗಾಗಿ ನಾನು ಪ್ರಶ್ನೆ ಮಾಡಿದೆವು ಎಂದು ವಿಧಾನಪರಿಷತ್‌ ಸದಸ್ಯ ರವಿ ಕೂಡಾ ಹೇಳಿದ್ದಾರೆ.

ಭಾಷಣದ ವೇಳೆ ಅಶ್ವತ್ಥ್‌ ನಾರಾಯಣ್‌ ಅವರು ಜನರ ಪರ ಕೆಲಸ ಮಾಡುವವರನ್ನು ನಾಯಕ ಅಂತಾರೆ.ತಮ್ಮ ಪರ ಕೆಲಸ ಮಾಡುವವರನ್ನು ಏನಂತಾರೆ ಎಂದು ಪ್ರಶ್ನೆ ಮಾಡಿದರು. ಈ ಕಾರಣಕ್ಕೆ ಸಂಸದ ಡಿ.ಕೆ.ಸುರೇಶ್‌ ರೆಬಲ್‌ ಆದರು ಎಂದು ಹೇಳಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.

Share Post