ಖಾಸಗಿ ಸಾರಿಗೆಯವರ ಬೇಡಿಕೆ ಈಡೇರಿಸಲು 5500 ಕೋಟಿ ರೂ. ಬೇಕು; ರಾಮಲಿಂಗಾರೆಡ್ಡಿ
ಬೆಂಗಳೂರು; ಖಾಸಗಿ ಸಾರಿಗೆ ಒಕ್ಕೂಟಗಳು ಇಂದು ಮುಷ್ಕರ ನಡೆಸುತ್ತಿವೆ. ಆದ್ರೆ ಅವರ ಬೇಡಿಕೆಗಳು ಈಡೇರಿಸಲು ಸಾಧ್ಯವಿಲ್ಲದಂತಹವು. ಯಾಕಂದ್ರೆ ಅವರ ಬೇಡಿಕೆಗಳನ್ನು ಈಡೇರಿಸಲು ಬರೋಬ್ಬರಿ 5500 ಕೋಟಿ ರೂಪಾಯಿ ಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಇಷ್ಟು ದೊಡ್ಡ ಮೊತ್ತದ ಬೇಡಿಕೆ ಈಡೇರಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.
ಈಗ ಅವರು ಇಟ್ಟಿರುವ ಬೇಡಿಕೆಗಳಲ್ಲಿ ಎರಡು ಸಮಸ್ಯೆಗಳು ಮಾತ್ರ ನಮ್ಮ ಸರ್ಕಾರದಿಂದ ಉಂಟಾಗಿರೋದು. ಆದ್ರೆ ಉಳಿದವು ಕಳೆದ ನಾಲ್ಕೈದು ವರ್ಷಗಳಿಂದಲೂ ಇವೆ. ಬಿಜೆಪಿ ರಾಜಕೀಯ ಮಾಡೋದಕ್ಕಾಗಿ ಮುಷ್ಕರಕ್ಕೆ ಬೆಂಬಲ ಕೊಟ್ಟಿದೆ ಎಂದು ಆರೋಪಿಸಿದರು.