BengaluruHealth

ಒಬ್ಬ ಮನುಷ್ಯ ಎಷ್ಟು ಸಕ್ಕರೆ ಸೇವಿಸಬೇಕು..?; ಶುಗರ್‌ ಫ್ರೀ ಪಿಲ್ಸ್‌ ಬಳಕೆ ಒಳ್ಳೆಯದೇ..?

ಬೆಂಗಳೂರು;  ಇತ್ತೀಚೆಗೆ ಸಕ್ಕರೆ ಕಾಯಿಲೆ ಎಲ್ಲರಿಗೂ ವಕ್ಕರಿಸುತ್ತಿದೆ.. ಪ್ರತಿ ಮನೆಯಲ್ಲೂ ಒಬ್ಬರು ಮಧುಮೇಹಿ ಸಿಗುತ್ತಾರೆ. ಆ ಮಟ್ಟಿಗೆ ಇದು ಜನರನ್ನು ಬಾಧಿಸುತ್ತಿದೆ. ಹೀಗಾಗಿ ನಾವು ಯಾವುದಾದರೂ ಮನೆಗೋ, ಯಾರನ್ನಾದರೂ ಭೇಟಿಯಾಗಲೋ ಹೋದಾಗ ಕಾಫಿ ಅಥವಾ ಟೀ ಕೊಡುತ್ತಾರೆ. ಆಗ ಅವರು ಸಕ್ಕರೆ ಹಾಕಬೇಕೋ ಬೇಡವೋ ಎಂದು ಕೇಳುತ್ತಾರೆ. ಇನ್ನು ಕೆಲವು ಕಡೆ ಸಕ್ಕರೆ ಬದಲಾಗಿ ಶುಗರ್‌ ಫ್ರೀ ಮಾತ್ರೆಗಳನ್ನು ಬಳಸುತ್ತಾರೆ. ಹಾಗಾದ್ರೆ, ಮನುಷ್ಯ ಎಷ್ಟು ಸಕ್ಕರೆ ಸೇವಿಸಿದರೆ ಒಳ್ಳೆಯದು..? ಶುಗರ್‌ ಫ್ರೀ ಮಾತ್ರೆಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಾ..? ಈ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

ಮಧುಮೇಹಿಗಳು ಕೃತಕ ಸಹಿಕಾರಕಗಳನ್ನು ಬಳಸುತ್ತಿದ್ದಾರೆ. ಈ ಶುಗರ್‌ ಫ್ರೀ ಮಾತ್ರೆಗಳನ್ನು ಬಳಸಿದರೆ ತೂಕ ಕಡಿಮೆಯಾಗುತ್ತದೆ. ಮಧುಮೇಹ ಹತೋಟಿಗೆ ಬರುತ್ತದೆ ಎಂದು ಬಹುತೇಕರು ನಂಬಿದ್ದಾರೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇಂತಹ ಮಾತ್ರೆಗಳಿಂದ ಯಾವ ಉಪಯೋಗವೂ ಇಲ್ಲ.

ಮನೆಗೆ ಬರುವ ಅತಿಥಿಗಳಿಗೆ ಚಹಾ ಅಥವಾ ಕಾಫಿ ಬೇಕೇ ಎಂದು ಕೇಳುವುದು ಭಾರತದಲ್ಲಿ ತುಂಬಾ ಸಾಮಾನ್ಯವಾಗಿದೆ. ಅಲ್ಲದೆ ಕೂಡಲೇ ಸಕ್ಕರೆ ಹೆಚ್ಚಾ ಕಡಿಮೆ ಬೇಕೋ ಎಂದು ಕೇಳುತ್ತಾರೆ. ಸಕ್ಕರೆ ಸೇವನೆ ಕಡಿಮೆ ಮಾಡೋದಕ್ಕಾಗಿ ಜನರು ಪರ್ಯಾಯ ಮಾರ್ಗಗಳನ್ನು ಬಳಸಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿದೆ.

ನೈಸರ್ಗಿಕ ಸಕ್ಕರೆ ಇರುವ ಹಣ್ಣು, ಹಣ್ಣಿನ ರಸವನ್ನು ಸೇವಿಸಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತೆ. ಒಂದು ವಾರ ಅಥವಾ ಎರಡು ವಾರಗಳ ಕಾಲ ಕೃತಕ ಸಿಹಿಕಾರಕಗಳನ್ನು ಬಳಸಿದರೆ ಒಳ್ಳೆಯದು, ಅದನ್ನು ಮೀರಿ ಬಳಸಿದರೆ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಸ್ಟೀವಿಯಾ ಸಸ್ಯದ ಎಲೆಗಳನ್ನು ನೇರವಾಗಿ ಮಾಧುರ್ಯಕ್ಕಾಗಿ ಬಳಸಲಾಗುತ್ತದೆ. ಸ್ಟೀವಿಯಾ ಸಸ್ಯದ ಎಲೆಗಳನ್ನು ಸಂಸ್ಕರಿಸಿ ಮಾತ್ರೆಗಳ ರೂಪದಲ್ಲಿ ತೆಗೆದುಕೊಂಡರೆ ಹಾನಿಕಾರಕ ಎಂದು ಹೇಳಲಾಗುತ್ತಿದೆ.

 ಸಿಹಿಗಾಗಿ ಸ್ಟೀವಿಯಾ ಮಾತ್ರೆಗಳನ್ನು ಬಳಸೋದು ಒಳ್ಳೆಯದಾ..?

ಮಧುಮೇಹಿಗಳು ಸಿಹಿಗಾಗಿ ಸಕ್ಕರೆಯ ಬದಲು ಕೃತಕ ಸಿಹಿ ಮಾತ್ರೆಗಳನ್ನು ಸೇವಿಸಬಹುದೇ ಎಂಬ ಪ್ರಶ್ನೆಗೆ, ‘‘ಎನ್ ಎಸ್ ಎಸ್ ಮಾತ್ರೆಗಳನ್ನು ಯಾವುದೇ ರೂಪದಲ್ಲಿ ಸೇವಿಸಬಾರದು. ರುಚಿಗೆ ಬಳಸಬೇಕೆಂದರೆ ಅತ್ಯಂತ ನಿಯಂತ್ರಿತ ಪ್ರಮಾಣದಲ್ಲಿ ಬಳಸಬೇಕು’ ಎಂದು ಡಾ.ಸುರೇಂದ್ರ ಕುಮಾರ್  ಎಂಬುವವರು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ದೇಹದಲ್ಲಿ ಎನ್ಎಸ್ಎಸ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಕೃತಕ ಸಿಹಿಕಾರಕಗಳು ಸಕ್ಕರೆಗಿಂತ 700 ಪಟ್ಟು ಹೆಚ್ಚು ಶಕ್ತಿಯುತವಾಗಿವೆ ಎಂದು ಡಾ.ಸುರೇಂದ್ರ ಹೇಳಿದ್ದಾರೆ. ಅವು ಮೆದುಳಿನ ಒಂದು ಭಾಗದ ಮೇಲೆ ಪರಿಣಾಮ ಬೀರುತ್ತವೆ. ಇದು ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದಂತೆ.  ಇದರಿಂದ ಜನ ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ, ಇದರಿಂದ ತೂಕ ಹೆಚ್ಚಾಗುತ್ತದೆ ಮತ್ತು ತೂಕ ಹೆಚ್ಚಾಗುವುದರಿಂದ ವಿವಿಧ ರೋಗಗಳ ಬರುವ ಅಪಾಯ ಹೆಚ್ಚಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಯಾವ ರೋಗಗಳು ಸಂಭವಿಸಬಹುದು?
NSS ಗಳ ದೀರ್ಘಾವಧಿಯ ಬಳಕೆಯು ಟೈಪ್-2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು ಎಂದು WHO ಎಚ್ಚರಿಸಿದೆ. ಇದಲ್ಲದೆ, ಇದು ಸಾಯುವ ಪರಿಣಾಮವನ್ನು ಹೊಂದಿದೆ ಎಂದು ಎಚ್ಚರಿಸಿದೆ.ಎನ್ಎಸ್ಎಸ್ ಬಳಸುವುದರಿಂದ ತೂಕ ಹೆಚ್ಚಾಗುವುದು, ಬಿಪಿ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಕಾರಣವಾಗಬಹುದು, ಇವೆಲ್ಲವೂ ಹೃದ್ರೋಗಕ್ಕೆ ಕಾರಣವಾಗಬಹುದು ಎಂದು ಡಾ.ನೀರು ಗೇರಾ ಎಂಬುವವರು ಹೇಳಿದ್ದಾರೆ.

ಎಷ್ಟು ಸಕ್ಕರೆ ತಿನ್ನಬೇಕು?
ಸಿಹಿತಿಂಡಿಗಳನ್ನು ತಿನ್ನುವುದರಿಂದ ನಮಗೆ ಸಂತೋಷವಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ಈ ಪ್ರಯೋಜನದ ಮಟ್ಟದಲ್ಲಿ ನಾವು ಸಿಹಿತಿಂಡಿಗಳನ್ನು ತಿನ್ನುತ್ತಿದ್ದೇವೆಯೇ ಅಥವಾ ಹೆಚ್ಚು ತಿನ್ನುತ್ತಿದ್ದೇವೆಯೇ ಎಂಬುದು ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಸಕ್ಕರೆಯನ್ನು ಮಿತವಾಗಿ ತೆಗೆದುಕೊಂಡು ಅದರ ಬದಲಿಗೆ  ಮ್ಯಾಪಲ್ ಸಿರಪ್, ಜೇನುತುಪ್ಪ ಮತ್ತು ಬೆಲ್ಲವನ್ನು ಬಳಸಲು ಸೂಚಿಸಲಾಗುತ್ತದೆ.

“ಪ್ರತಿ ಊಟದಲ್ಲಿ ಸಕ್ಕರೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. “ಚಹಾ ಕುಡಿಯುವ ಮೊದಲು, ನಿಮ್ಮ ಬಾಯಿಯ ಮೂಲೆಯಲ್ಲಿ ಸ್ವಲ್ಪ ಸಕ್ಕರೆ ಹಾಕಿ ನಂತರ ಸಿಹಿಗೊಳಿಸದ ಚಹಾವನ್ನು ಕುಡಿಯಿರಿ” ಎಂದು ಅವರು ಹೇಳುತ್ತಾರೆ. ಏನನ್ನೂ ತಿನ್ನುವ ಮೊದಲು ಹೀಗೆ ಮಾಡಿದರೆ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರಲು ಸಾಧ್ಯವಾಗುತ್ತದೆ. ಬಾಯಿಗೂ ರುಚಿ ಬರುತ್ತದೆ ಎನ್ನುತ್ತಾರೆ ವೈದ್ಯರು.

ಅಲ್ಲದೆ, ಬೆಲ್ಲವನ್ನು ತಿನ್ನುವಾಗ, ಒಮ್ಮೆಗೇ ಅದನ್ನು ಅಗಿಯಬೇಡಿ,  ಅದನ್ನು ಬಾಯಿಯಲ್ಲಿ ಇಟ್ಟುಕೊಂಡು ಚೀಪಬೇಕು ಎನ್ನುತ್ತಾರೆ ವೈದ್ಯರು.

 

Share Post