BengaluruCrime

3 ಕೋಟಿ ರೂ. ಮೌಲ್ಯದ ನಿಷೇಧಿತ ಇ-ಸಿಗರೇಟ್‌ ದಾಸ್ತಾನು; ಆರೋಪಿ ಅರೆಸ್ಟ್‌

ಬೆಂಗಳೂರು; ಭಾರತದಲ್ಲಿ ಇ  ಸಿಗರೇಟ್‌ಗೆ ನಿಷೇಧವಿದೆ. ಆದ್ರೆ ವ್ಯಕ್ತಿಯೊಬ್ಬ ವಿದೇಶದಿಂದ ಇ-ಸಿಗರೇಟ್‌ಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ. ಇದರ ಮಾಹಿತಿ ಅರಿತ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ಇ-ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಈ ಇ-ಸಿಗರೇಟ್‌ಗಳನ್ನು ದಾಸ್ತಾನಿಡಲಾಗಿತ್ತು. ಇವುಗಳನ್ನು ಬ್ಲೂ ಡಾರ್ಟ್ ಕೊರಿಯರ್ ಮೂಲಕ ದುಬೈಯಿಂದ ದೆಹಲಿಗೆ ತೆರಿಸಿ ಅಲ್ಲಿಂದ ಬೆಂಗಳೂರಿಗೆ ತರಿಸಲಾಗಿತ್ತು ಎಂದು ಹೇಳಲಾಗಿದೆ.

ಈ ಇ-ಸಿಗರೇಟ್‌ ಒಂದರ ಬೆಲೆ ಬರೋಬ್ಬರಿ ಐದರಿಂದ ಆರು ಸಾವಿರ ರೂಪಾಯಿ ಇದೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಶೋಹೇಬ್ ಎಂದು ಗುರುತಿಸಲಾಗಿದೆ. ಈತ ಆನ್‌ಲೈನ್‌ ಮೂಲಕ ಆರ್ಡರ್‌ ಪಡೆದುಕೊಂಡು ಇ-ಸಿಗರೇಟ್‌ಗಳನ್ನು ಡೆಂಜೋ, ಪೋರ್ಟರ್‌ ಮೂಲಕ ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Share Post