ಇಂದಿನಿಂದ ರಂಜಾನ್ ಉಪವಾಸ ಆರಂಭ
ಬೆಂಗಳೂರು: ನಿನ್ನೆ ರಾತ್ರಿ ಚಂದ್ರ ಗೋಚರಿಸಿದ ಕಾರಣ ಇಂದಿನಿಂದ ರಂಜಾನ್ ಉಪವಾಸ ಆರಂಭವಾಗಲಿದೆ. ಒಂದು ತಿಂಗಳ ಕಾಲ ರಂಜಾನ್ ಉಪವಾಸ ಕೈಗೊಳ್ಳಲಾಗುತ್ತದೆ ಎಂದು ಶಫಿ ಸಅದಿ ಹೇಳಿದ್ದಾರೆ. ಏಪ್ರಿಲ್ 3 ಅಂದರೆ ಇಂದು ಮೊದಲ ಉಪವಾಸ ಆರಂಭವಾಗುತ್ತದೆ. ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವರೆಗೆ ಉಪವಾಸ ಕೈಗೊಳ್ಳಲಿದ್ದಾರೆ.
ಈ ಪವಿತ್ರ ತಿಂಗಳ ಮೊದಲ ಮತ್ತು ಕೊನೆಯ ದಿನಾಂಕಗಳು ಚಂದ್ರನ ಇಸ್ಲಾಮಿಕ್ ಕ್ಯಾಲೆಂಡರ್ ಅವಲಂಬಿಸಿರುತ್ತದೆ. ಅಮಾವಾಸ್ಯೆಯ ನಂತರ ಕಾಣಿಸಿಕೊಳ್ಳುವ ಚಂದ್ರ ಗೋಚರವನ್ನು ನೋಡಿ ರಂಜಾನ್ ಉಪವಾಸ ಪ್ರಾರಂಭವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.