ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಮುಹೂರ್ತ ನಿಗದಿಯಾಗಿದ್ದ ಕರ್ನಾಟಕದಲ್ಲಿ!
ಬೆಳಗಾವಿ; ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಆ ದಿನ ಮಧ್ಯಾಹ್ನ 12.15ರಿಂದ 12.45ರ ನಡುವೆ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದು ಅಭಿಜಿನ್ ಲಘ್ನದಲ್ಲಿ ನಡೆಯಲಿದೆ.
ಇದೇ ಸಮಯದಲ್ಲಿ ರಾಮನ ಜನನವಾಗಿದ್ದರಿಂದ ಇದೇ ಲಘ್ನದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ಮುಹೂರ್ತವನ್ನು ಬೆಳಗಾವಿಯ ನವ ಬೃಂದಾವನ ನಿವಾಸಿಯಾಗಿರುವ ವಿಜಯೇಂದ್ರ ಶರ್ಮಾ ಅವರು ನಿಗದಿ ಮಾಡಿದ್ದಾರೆ. ವಿದ್ಯಾವಿಹಾರ ವಿದ್ಯಾಲಯ ಕುಲಪತಿಯಾಗಿ ವಿಜಯೇಂದ್ರ ಶರ್ಮಾ ಅವರಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೋಶ್ಯಾಧ್ಯಕ್ಷ ಸ್ವಾಮಿ ಗೋವಿಂದ್ ದೇವಗಿರಿ ಅವರು ಮುಹೂರ್ತ ಕೇಳಿದ್ದರು. ಹೀಗಾಗಿ ಅವರೇ ಮುಹೂರ್ತ ನಿಗದಿ ಮಾಡಿದ್ದಾರೆ.
ವಿಜಯೇಂದ್ರ ಶರ್ಮಾ ಅವರು ದೇವಾಲಯದ ಒಳಗೆ ಮೂರ್ತಿ ಪ್ರವೇಶ (ಜ.18) ಮತ್ತು ಪ್ರಾಣ ಪ್ರತಿಷ್ಠೆಗೆ (ಜ.22) ಈ ಎರಡು ದಿನದ ಮುಹೂರ್ತವನ್ನು ನಿಗದಿಪಡಿಸಿ 2023ರ ಏ.15ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಪತ್ರದ ಮೂಲಕ ಕಳುಹಿಸಿದ್ದರು ಎಂದು ತಿಳಿದುಬಂದಿದೆ.