ಮಾಂಡೋಸ್ ಎಫೆಕ್ಟ್; ಇನ್ನೂ 3 ದಿನ ಮಳೆ, ಮಳೆ
ಬೆಂಗಳೂರು; ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ತಣ್ಣನೆನಯ ವಾತಾವರಣವಿದೆ. ನಿನ್ನೆಯಿಂದ ಜಡಿ ಮಳೆ ಸುರಿಯುತ್ತಿದೆ. ಇದು ಇನ್ನೂ ಮೂರು ನಾಲ್ಕು ದಿನ ಮುಂದುವರೆಯಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತ ಎದ್ದಿದೆ. ಕರ್ನಾಟಕ ಸೇರಿ ಕರಾವಳಿ ಭಾಗದ ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದೆ. ರಣ ಚಳಿಗೆ ಬೆಂಗಳೂರಿಗರು ತತ್ತರಿಸಿದ್ದಾರೆ. ಎಲ್ಲರೂ ಮನೆಯಲ್ಲೇ ಕೂರುವಂತಾಗಿದೆ. ವೀಕೆಂಡ್‌ನಲ್ಲಿ ಮಾಜಾ ಮಾಡಬೇಕೆಂದಿದ್ದವರು ಮನೆಯಲ್ಲೇ ಕೂತಿದ್ದಾರೆ.