BengaluruPolitics

Rahul Gandhi; ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯರ ಜೊತೆ ರಾಹುಲ್‌ ಗಾಂಧಿ ಸಂಚಾರ

ಬೆಂಗಳೂರು; ನಿನ್ನೆಯಷ್ಟೇ ಫುಡ್‌ ಡೆಲಿವರಿ ಬಾಯ್‌ಗಳ ಜೊತೆ ಕಾಲ ಕಳೆದಿದ್ದ, ಅವರ ಬೈಕ್‌ನಲ್ಲಿ ಸಂಚಾರ ಮಾಡಿ, ನಂತರ ಅವರೊಂದಿಗೆ ಊಟ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಂದು ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯರ ಜೊತೆ ಸಂಚಾರ ಮಾಡಿದ್ದಾರೆ. ಇಂದು ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾಗಿದ್ದು, ಮತದಾರರ ಗಮನ ಸೆಳೆಯಲು ರಾಹುಲ್‌ ಗಾಂಧಿ ಸಾಮಾನ್ಯರ ಜೊತೆ ಬೆರೆಯುತ್ತಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ ಸಾಮಾನ್ಯ ನಾಗರಿಕರಂತೆ ಸೋಮವಾರ ಸಂಚರಿಸಿದ್ದಾರೆ. ಕನ್ನಿಂಗ್ ಹ್ಯಾಮ್ ರಸ್ತೆಯಿಂದ ರಾಮಮೂರ್ತಿ ನಗರ ಕಡೆ ಹೋಗುತ್ತಿದ್ದ ಬಸ್‌ ಹತ್ತಿದ ರಾಹುಲ್ ಗಾಂಧಿ ಆರು ಕಿಲೋ ಮೀಟರ್‌ ಪ್ರಯಾಣ ಮಾಡಿದ್ದಾರೆ. ಈ ವೇಳೆ ಅವರು ಪ್ರಯಾಣಿಕರ ಜೊತೆ ಸಂವಾದ ನಡೆಸಿದ್ದಾರೆ.

ನಿನ್ನೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು, ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ಬೆಂಗಳೂರು ಸುತ್ತಿದ್ದರು. ಅನಂತರ ಡೆಲಿವರಿ ಬಾಯ್‌ ಗಳ ಜೊತೆ ಹೋಟೆಲ್‌ವೊಂದರಲ್ಲಿ ಸಂವಾದ ನಡೆಸಿದ್ದರು. ಅವರ ಜೊತೆ ಊಟ ಕೂಡ ಮಾಡಿದ್ದರು.

Share Post